Sunday, December 22, 2024

ನ್ಯಾಯಾಧೀಶರ ಕಾರು ಮತ್ತು ಬಸ್ ನಡುವೆ ಅಪಘಾತ!

ಶಿವಮೊಗ್ಗ :​  ಸಿಗಂಧೂರು ದೇವಿ ದರ್ಶನಕ್ಕೆ ತೆರಳುತ್ತಿದ್ದ ನ್ಯಾಯಾಧೀಶರ ಕಾರು ಮತ್ತು ಬಸ್​ ನಡುವೆ ಅಪಘಾತ ಸಂಭವಿಸಿರುವ ಘಟನೆ ಸಾಗರ ತಾಲೂಕು ಆನಂದಪುರದ ಐಗಿನಬೈಲು ಗ್ರಾಮದ ಬಳಿ ನೆಡೆದಿದೆ.

ಇದನ್ನು ಓದಿ : ಫ್ಲೈಓವರ್​ ಮೇಲೆ ಸ್ಕೂಟರ್​ ಅಡ್ಡಗಟ್ಟಿ 1.7ಕೋಟಿ ಮೌಲ್ಯದ ಚಿನ್ನ ರಾಬರಿ!

ಶಿವಮೊಗ್ಗ ಹೈಕೋರ್ಟ್​ನ ನ್ಯಾಯಾಧೀಶರು ಎರಡು ಪ್ರತ್ಯೇಕ ಕಾರುಗಳಲ್ಲಿ ಕುಟುಂಬಸಮೇತರಾಗಿ ದೇವಿ ದರ್ಶನಕೆಂದು ಹೊರಟಿದ್ದಾಗ ಜೆ.ಆರ್​.ಬಸ್​​​ ಚಾಲಕನ ನಿಯಂತ್ರಣ ತಪ್ಪಿ ನ್ಯಾಯಾಧೀಶರ ಕಾರಿಗೆ ಹೋಗಿ ಡಿಕ್ಕಿ ಹೋಡೆದಿದ್ದು  ಡಿಕ್ಕಿ ಹೊಡೆದ ರಭಸಕ್ಕೆ ಕಾರು ಪಲ್ಟಿಯಾಗಿದೆ, ಇದೇ ವೇಳೆ, ಹಿಂಬದಿ ಬರುತ್ತಿದ್ದ ಮತ್ತೊಂದು ಕಾರಿಗೂ ಬಸ್ ಡಿಕ್ಕಿ ಹೊಡೆದಿದೆ, ಈ ವೇಳೆ ಕಾರನಲ್ಲಿ ದನದ ಮಾಂಸ ಪತ್ತೆಯಾಗಿದ್ದು ಕಾರಿನಲ್ಲಿದ್ದ ಇಬ್ಬರು ಯುವಕರು ಕಾರನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸದ್ಯ ಘಟನಾ ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES