Monday, December 23, 2024

ಫ್ಲೈಓವರ್​ ಮೇಲೆ ಸ್ಕೂಟರ್​ ಅಡ್ಡಗಟ್ಟಿ 1.7ಕೋಟಿ ಮೌಲ್ಯದ ಚಿನ್ನ ರಾಬರಿ!

ಬೆಂಗಳೂರು : ಬೈಕ್​ ಅಡ್ಡಗಟ್ಟಿ ಸುಮಾರು 1.7 ಕೋಟಿ ಮೌಲ್ಯದ ಚಿನ್ನ ದೋಚಿ ಪರಾರಿಯಾದ ಘಟನೆ ಕೆ.ಆರ್. ಮಾರ್ಕೆಟ್  ಫ್ಲೈ ಒವರ್ ಮೇಲೆ ನಡೆದಿದೆ.

ಇದನ್ನೂ ಓದಿ: ಬಿಸಿಯೂಟ ಸಿಬ್ಬಂದಿಗಳಿಗೆ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ವ್ಯಾಪಾರಿಯೊಬ್ಬರು ತಮ್ಮ ಸ್ಕೂಟರ್​ನಲ್ಲಿ ಚಿನ್ನವನ್ನಿಟ್ಟುಕೊಂಡು ಕೆ,ಆರ್​ ಮಾರುಕಟ್ಟೆ ಫ್ಲೈಓವರ್​ ಮೇಲೆ ಹೋಗುವಾಗ ಸಿನೀಮೀಯ ರೀತಿಯಲ್ಲಿ ಸ್ಕೂಟರ್  ಹಿಂಬಾಲಿಸಿಕೊಂಡು ಬಂದ ಇಬ್ಬರು ದುಷ್ಕರ್ಮಿಗಳು ಸ್ಕೂಟರ್ ಸ್ಲೋ ಮಾಡುವಂತೆ ಹೇಳಿ ಬೈಕ್​ ಅಡ್ಡಗಟ್ಟಿ ಸ್ಕೂಟರ್​ನಲ್ಲಿಟ್ಟಿದ್ದ 1.7 ಕೋಟಿ ಮೌಲ್ಯದ ಚಿನ್ನವಿದ್ದ ಬ್ಯಾಗ್​ ಕಸಿದು ರಾಬರಿ ಮಾಡಿದ್ದಾರೆ.

ಈ ಘಟನೆಯೂ ಫ್ಳೈಓವರ್​ ಮೇಲೆ ನಡೆದಿದ್ದರಿಂದ ಸುತ್ತ ಯಾವುದೇ ಸಿಸಿಟಿವಿ ಸಹ ಇರಲಿಲ್ಲ ಎನ್ನಲಾಗಿದೆ. ಇನ್ನೂ ರಾಬರಿಯ ಕುರಿತು ಕಾಟನ ಮೇಟೆ ಪೋಲೀಸ್ ಠಾಣೆಗೆ ದೂರು ದಾಖಲಾಗಿದ್ದು ತನಿಖೆ ಆರಂಭಿಸಿದ್ದಾರೆ.

RELATED ARTICLES

Related Articles

TRENDING ARTICLES