Friday, November 22, 2024

ಗೃಹಲಕ್ಷ್ಮಿಗೆ ಸರ್ವರ್​ ಕಾಟದ ಪ್ರಶ್ನೆಯೇ ಇಲ್ಲ :ಸಚಿವೆ ಲಕ್ಷ್ಮಿಹೆಬ್ಬಾಳ್ಕರ್

ಬೆಂಗಳೂರು : ಗೃಹ ಲಕ್ಷ್ಮಿ ಯೋಜನೆ ಜಾರಿಗೆ ಸರ್ವರ್ ಡೌನ್ ಆಗುವ ಪ್ರಶ್ನೆಯೇ ಇಲ್ಲಾ ಇನ್ನೆರಡು ಮೂರು ದಿನಗಳಲ್ಲಿ ಪತ್ರಿಕಾಗೋಷ್ಟಿ ಕರೆದು ಮಾಹಿತಿ ನೀಡುತ್ತೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್​ ತಿಳಿಸಿದರು.

ಇದನ್ನೂ ಓದಿ: ಪೆನ್​ ಡ್ರೈವ್​ ರಹಸ್ಯ ರಿಲೀಸ್​ ಗೆ ಡೇಟ್​ ಫಿಕ್ಸ್ ಮಾಡಿದ ಕುಮಾರಸ್ವಾಮಿ!

ವಿಧಾನಪರಿಷತ್​ ನಲ್ಲಿ ನಡೆದ ಚರ್ಚೆ ವೇಳೆ ಗೃಹಲಕ್ಷ್ಮಿ ಸರ್ವರ್ ಡೌನ್ ಅಗಿದೆ ಎಂಬ ಬಿಜೆಪಿ ನಾಯಕಿ ಹೇಮಲಾತಾ ನಾಯಕ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರ್ವರ್​ ಡೌನ್​ ಆಗುವ ಪ್ರಶ್ನೆಯೇ ಇಲ್ಲ, ಗೃಹಲಕ್ಷ್ಮಿ ಯೋಜನೆಗೆ ಇನ್ನೂ ಅರ್ಜಿ ಪ್ರಾರಂಭಿಸಿಲ್ಲ, ಈ ಕುರಿತು ಎರಡು ಮೂರು ದಿನಗಳಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಲಿದ್ದೇನೆ.

ಬಳಿಕ ನಾಲ್ಕೈದು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುವುದು, ಈ ಯೋಜನೆಗೆ ವಾರ್ಷಿಕವಾಗಿ 30,000 ಕೋಟಿ ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ, ಪ್ರಸಕ್ತ ಸಾಲಿನಲ್ಲಿ 17500 ಕೋಟಿ ಅನುದಾನ ಮೀಸಲಿಟ್ಟಿದ್ದೇವೆ, ಆಗಸ್ಟ್ 16-17 ರಿಂದ ಫಲಾನುಭವಿಗಳಿಗೆ ಹಣ ವರ್ಗಾವಣೆಯಾಗಲಿದೆ.

ಬೆಲೆ ಏರಿಕೆ ನಡುವೆ ಮನೆಯ ಯಜಮಾನಿಗೆ  ಸ್ವಾವಲಂಬನೆ  ಜೀವನ ನಡೆಸಲು 2 ಸಾವಿರ ಕೊಡಲು ಸಿಎಂ ಮುಂದಾಗಿದ್ದಾರೆ. ಮನೆಯಲ್ಲಿ ಜಗಳ ತಂದಿಡಬೇಕೆಂದು ಈ ಯೋಜನೆ ಸಿದ್ದಪಡಿಸಿದ್ದಲ್ಲಾ, ಸದ್ಯಕ್ಕೆ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಕರೆದಿಲ್ಲ, ಯಾವುದೇ ಆಪ್ ಕೂಡ ಬಿಡುಗಡೆ ಮಾಡಿಲ್ಲ ಎಂದು ಹೇಮಲತಾ ನಾಯ್ಕ್  ಪ್ರಶ್ನೆಗೆ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಉತ್ತರ ನೀಡಿದರು.

RELATED ARTICLES

Related Articles

TRENDING ARTICLES