Thursday, January 23, 2025

ಪೊಲೀಸ್​ ವೇಶದಲ್ಲಿ ಬಂದ ಕತರ್ನಾಕ್​ ಕಳ್ಳರಿಂದ ದರೋಡೆ! ದೂರು ದಾಖಲು

ಬೆಂಗಳೂರು : ಪೊಲೀಸರ ಸೋಗಿನಲ್ಲಿ ಬಂದ ಖತರ್ನಾಕ್​ ಕಳ್ಳರು ಏಕಾಏಕಿ ಮನೆಗೆ ನುಗ್ಗಿ ದರೋಡೆ ಮಾಡಿರುವ ಘಟನೆ ಶುಕ್ರವಾರ ಬೆಳಗ್ಗೆ ವಿದ್ಯಾರಣ್ಯಪುರದಲ್ಲಿ ನಡೆದಿದೆ.  

ಇದನ್ನೂ ಓದಿ : ಹವಾ ಕ್ರಿಯೇಟ್​ ಮಾಡಿದ್ದಕ್ಕೆ ಕೊಲೆಯಾದ  ರೌಡಿಶೀಟರ್​ ಕಪಿಲ್: ಆರೋಪಿಗಳ ಬಂಧನ!

ವಿದ್ಯಾರಣ್ಯಪುರ ವ್ಯಾಪ್ತಿಯ ರಾಮಚಂದ್ರಾಪುದಲ್ಲಿ, ಖಾಸಗಿ ಕಂಪೆನಿಯಲ್ಲಿ ಕೆಲಸಮಾಡುತ್ತ ಬಾಡಿಗೆಮನೆಯಲ್ಲಿ ವಾಸವಾಗಿದ್ದ ಯುವಕರ ಮನೆಗೆ ಇಂದು ಬೆಳಗ್ಗೆ ಪೊಲೀಸ್​ ವೇಶದಲ್ಲಿ ಬಂದ ಕಳ್ಳರು, ಮನೆ ಬಾಗಿಲು ತಟ್ಟಿ ಏಕಾಏಕಿ ಒಳಗೆ ನುಗ್ಗಿದ್ದಾರೆ, ನಿಮ್ಮ ಮನೆಯಲ್ಲಿ  ಅಕ್ರಮವಾಗಿ ಡ್ರಗ್ಸ್​ ಇರುವುದರ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು  ಶೋಧ ನಡೆಸಿದ್ದಾರೆ,

ಈ ವೇಳೆ  ಯಾವುದೇ ಬೆಲೆಬಾಳುವ ವಸ್ತುಗಳು ಸಿಗದ ಹಿನ್ನೆಲೆ ಯುವಕರಿಗೆ  ಚಾಕು ತೋರಿಸಿ ಯುವಕರ ಬಳಿ ಇದ್ದ ಉಂಗುರ, ಕಿವಿಯಲ್ಲಿದ್ದ ವೋಲೆ, ಫೋನ್​ ಪೇ ಮೂಲಕ 13 ಸಾವಿರ ಹಣವನ್ನು ಹಾಕಿಸಿಕೊಂಡು ಪರಾರಿಯಾಗಿದ್ದಾರೆ.

ಸದ್ಯ ವಿದ್ಯಾರಣ್ಯಪುರ ಠಾಣೆಗೆ ಯುವಕರು ದೂರು ನೀಡಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸ್ತಿದ್ದಾರೆ.

RELATED ARTICLES

Related Articles

TRENDING ARTICLES