Wednesday, January 22, 2025

ವಂಶಿಕಾ ಹೆಸರಲ್ಲಿ ವಂಚಿಸುತ್ತಿದ್ದ ನಿಶಾ,ಕೋರ್ಟ್​ ಗೆ ಹಾಜರಪಡಿಸಿದ ಪೋಲಿಸರು

ಬೆಂಗಳೂರು :  ವಂಶಿಕಾ ಹೆಸರು ಬಳಸಿಕೊಂಡು ಜನರಿಗೆ ಮೋಸ ಮಾಡುತ್ತಿದ್ದ ಆರೋಪಿ ನಿಶಾ ನನ್ನು ಕೋರ್ಟ್​ ಗೆ ಹಾಜರ ಪಡಿಸಿರುವ ಪೋಲಿಸರು.

ಖ್ಯಾತ ನಟ ಮಾಸ್ಟರ್ ಆನಂದ್ ಅವೆರ ಮಗಳ ಹೆಸರನ್ನು ಬಳಸಿಕೊಂಡು ಹಲವು ಮಕ್ಕಳ ಪೋಷಕರಿಂದ ಲಕ್ಷ ಲಕ್ಷ ತೆಗೆದುಕೊಂಡು, ಆ್ಯಕ್ಟಿಂಗ್ ಚಾನ್ಸ್, ಮತ್ತು ರಿಯಾಲಿಟಿ ಶೋಗೆ ಚಾನ್ಸ್ ಕೊಡಿಸುತ್ತೇನೆ ಎಂದು ಜನರಿಗೆ ವಂಚಿಸಿರೋ ಆರೋಪಿ ನಿಶಾ ನರಸಿಂಹಪ್ಪ.

ಇಂತಹ ಜನರಿಂದ ಮೋಸ ಹೋಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಮೋಸ ಹೋಗುವವರು ಎಲ್ಲಿವರೆಗೂ ಇರುತ್ತಾರೋ ಅಲ್ಲಿವರೆಗೂ ಇಂತವರ ಸಂಖ್ಯೆ ಹೆಚ್ಚಾಗುತ್ತಲೆ ಇರುತ್ತದೆ.

ಈ ಸಂಬಂಧ ಮೋಸ ಹೋದ ಪೋಷಕರು ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೆ ಮಾಸ್ಟರ್ ಆನಂದ್ ಪತ್ನಿಯವರು ಸಹ ಈ ಪ್ರಕರಣದ ಬಗ್ಗೆ ದೂರು ನೀಡಿದ್ದರು.

39ನೇ ಎಸಿಎಮ್ ಎಮ್ ಕೋರ್ಟ್ ಗೆ ಹಾಜರುಪಡಿಸಲಿರೋ ಪೊಲೀಸರು

ಇದನ್ನು ಓದಿ : ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ KSRTC ಚಾಲಕ

ಈ ಘಟನೆ ಸಂಬಂಧ ಸದಾಶಿವನಗರ ಪೊಲೀಸರು ಆರೋಪಿತೆಯನ್ನ ಬಂಧಿಸಿದ್ದರು. ಪೋಲಿಸರು ಅವಳನ್ನು ವಿಚಾರಣೆಯನ್ನು ನೆಡೆಸಿದರು, ಬಳಿಕ ನಿಶಾ ನರಸಿಂಹಪ್ಪ ನನ್ನ 39 ನೇ ಎಸಿಎಮ್ ಎಮ್ ಕೋರ್ಟ್​ ಗೆ ಹಾಜರುಪಡಿಸಲು ಕರೆತಂದಿರುವ ಪೋಲಿಸರು. ಆರೋಪಿತೆಯನ್ನ ನ್ಯಾಯಂಗ ಬಂಧನಕ್ಕೆ ಒಪ್ಪಿಸಿ ಅವಳಿಗೆ ಶಿಕ್ಷೆಯಾಗುವಂತೆ ಮಾಡಲು ಪೋಲಿಸರು ಹಾಗೂ ಮೋಸ ಹೋದ ಪೋಷಕರು ಹಾಗೂ ವಂಶಿಕಾ ಪೋಷಕರು ಮುಂದಾಗಿದ್ದಾರೆ.

ಕೋರ್ಟ್​ ಗೆ ಒಪ್ಪಿಸಿದ ಬಳಿಕ ಅವಳಿಗೆ ಹದಿನಾಲ್ಕು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು 39ನೇ ಎಸಿಎಮ್ ಎಮ್ ಕೊರ್ಟ್​  ಆದೇಶವನ್ನು ನೀಡಿತು.

RELATED ARTICLES

Related Articles

TRENDING ARTICLES