Monday, December 23, 2024

ಹವಾ ಕ್ರಿಯೇಟ್​ ಮಾಡಿದ್ದಕ್ಕೆ ಕೊಲೆಯಾದ  ರೌಡಿಶೀಟರ್​ ಕಪಿಲ್: ಆರೋಪಿಗಳ ಬಂಧನ!

ಬೆಂಗಳೂರು : ರೌಡಿ ಶೀಟರ್ ಕಪಿಲ್ ಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: AI ನಿರೂಪಕಿ ಸೌಂದರ್ಯಳಿಂದ ನಿರೂಪಣೆ: ಪವರ್​ ಟಿವಿಯ ಮತ್ತೊಂದು ದಾಖಲೆ!

ಕಳೆದ ಜುಲೈ 11 ರಂದು  ಡಿ.ಜೆಹಳ್ಳಿಯಲ್ಲಿ ನಡೆದ ರೌಡಿಶೀಟರ್​ ಕಪಿಲ್​ ಕೊಲೆ, ಬೆಂಗಳೂರನ್ನು ಬೆಚ್ಚಿಬೀಳಿಸಿತ್ತು, ಈ ಪ್ರಕರಣದ ಪ್ರಮುಖ ಮೂವರು ಆರೋಪಿಗಳನ್ನು ಹೊಸೂರು ಬಳಿ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ಕಪಿಲ್​, ಇತ್ತೀಚೆಗೆ ಡಿ.ಜೆ ಹಳ್ಳಿಯಲ್ಲಿ ಹವಾ ಕ್ರಿಯೇಟ್​ ಮಾಡಿದ್ದ, ಈತನ ಮೇಲೆ  ಹೆಬ್ಬಾಳ ಪೊಲಿಸ್ ಠಾಣೆಯಲ್ಲಿ ರೌಡಿಶೀಟ್ ಕೂಡ ತೆರೆಯಲಾಗಿತ್ತು. ಹವಾ ಕ್ರಿಯೇಟ್​ ಮಾಡಿದ್ದ ಎನ್ನುವ ಕಾರಣಕ್ಕೆ ಡಿ.ಜೆಹಳ್ಳಿಯಲ್ಲಿ ಮೂವರು ಹಂತಕರಿಂದ ಜು.11 ರಂದು ಕೊಲೆಯಾಗಿದ್ದ.

ಡಿ.ಜೆ ಹಳ್ಳಿ ಪೊಲೀಸ್​ ಠಾಣೆಯಲ್ಲಿ ಹತ್ಯೆ ಕುರಿತು ಪಕರಣ ದಾಖಲಾಗಿತ್ತು, ಈ ಪ್ರಕರಣವನ್ನು ಬೆನ್ನಟ್ಟಿದ ಡಿ.ಜೆ.ಹಳ್ಳಿ ಇನ್ಸ್‌ಪೆಕ್ಟರ್‌ ಪ್ರಕಾಶ್‌ ನೇತೃತ್ವದ ತಂಡ, ಕೊಲೆ ನಡೆದ ಮೂರುದಿನಗಳಲ್ಲೇ ಹಂತಕರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

 

RELATED ARTICLES

Related Articles

TRENDING ARTICLES