Sunday, November 3, 2024

ಉಚಿತ ಸಾರಿಗೆ: ಇದುವರೆಗೆ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ ಎಷ್ಟು ಗೊತ್ತಾ?

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ಯೋಜನೆ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನಲೆ ಜುಲೈ 9 ರಂದು ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ವಿವರ ಹೀಗಿದೆ.

ಇದನ್ನೂ ಓದಿ: ಗೃಹಲಕ್ಷ್ಮಿಗೆ ಸರ್ವರ್​ ಕಾಟದ ಪ್ರಶ್ನೆಯೇ ಇಲ್ಲ :ಸಚಿವೆ ಲಕ್ಷ್ಮಿಹೆಬ್ಬಾಳ್ಕರ್

ಕೆಎಸ್ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸಿದ ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ: 19,93,224. ಮಹಿಳಾ ಪ್ರಯಾಣಿಕರ ಪ್ರಯಾಣದ ಒಟ್ಟು ಮೌಲ್ಯ: ₹5,24,69,978.00 ಆಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ: 21,50,001. ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಪ್ರಯಾಣದ ಒಟ್ಟು ಮೌಲ್ಯ: ₹2,73,16,933.00 ಆಗಿದೆ.

ವಾಯುವ ಸಾರಿಗೆಯಲ್ಲಿ ಪ್ರಯಾಣಿಸಿದ ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ: 15,80,786. ಮಹಿಳಾ ಪ್ರಯಾಣಿಕರ ಪ್ರಯಾಣದ ಒಟ್ಟು ಮೌಲ್ಯ: ₹ 3,79,44,003.00.

ಕಲ್ಯಾಣ ಕರ್ನಾಟ ಸಾರಿಗೆಯಲ್ಲಿ ಪ್ರಯಾಣಿಸಿದ ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ:  9,50,054.  ಮಹಿಳೆಯರ ಪ್ರಯಾಣದ ಒಟ್ಟು ಮೌಲ್ಯ: ₹ 2,91,56,809.00.

ಜೂನ್ 11ರಿಂದ ಜುಲೈ 14 ರವರೆಗೆ ನಾಲ್ಕು ನಿಗಮಗಳಲ್ಲಿ ಸಂಚರಿಸಿದ ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ- 18,72,12,972 ಆಗಿದ್ದು,  ಮಹಿಳಾ ಪ್ರಯಾಣಿಕರ ಟಿಕೆಟ್ ಒಟ್ಟು ಮೌಲ್ಯ- ₹446,26,21,979.00 ಆಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

RELATED ARTICLES

Related Articles

TRENDING ARTICLES