Wednesday, January 8, 2025

ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ: ಚಂದ್ರನ ಮೇಲೆ ಕಾಲಿಟ್ಟ 4ನೇ ದೇಶ ಭಾರತ!

ಬೆಂಗಳೂರು : ಭಾರತದ ಭಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಕ್ಕೆ ಕ್ಷಣಗಣನೆ ಶುರುವಾಗಿದ್ದು ಇಂದು ಮಧ್ಯಾಹ್ನ 2.35 ಕ್ಕೆ ಶ್ರೀಹರಿಕೋಟಾದ ಸತೀಶ್​ ಧವನ್ ಉಡ್ಡಯನ ಕೇಂದ್ರದಿಂದ ಉಡಾವಣೆಯಾಗಲಿದೆ.

ಇದನ್ನೂ ಓದಿ: ಹಾಲಿನ ದರ ಏರಿಕೆ: ಇಂದಿನ ಸಿಎಂ ಸಭೆಯಲ್ಲಿ ನಿರ್ಧಾರ!

ಇಂದು ಜು.14ರ ಮಧ್ಯಾಹ್ನ 2.30ರಿಂದ 3.30ರ ನಡುವೆ ಎಲ್‌ವಿಎಂ 3 ರಾಕೆಟ್‌ ಉಡಾವಣೆಯಾಗಲಿದೆ. ‘ಚಂದ್ರಯಾನ-3’ ರ ನೌಕೆಯ ಉಡಾವಣೆಯ ಮೂಲಕ ಇಸ್ರೋ ಹೊಸ ಮೈಲಿಗಲ್ಲು ಬರೆಯಲು ಸಜ್ಜಾಗಿದೆ, ಈ ಚಂದ್ರಯಾನ ನೌಕೆ ಆಗಸ್ಟ್‌ನಲ್ಲಿ ಚಂದ್ರನ ಮೇಲೆ ಇಳಿಯಲಿದೆ.

ಇದಕ್ಕೂ ಮುನ್ನ 2008ರಲ್ಲೇ ಚಂದ್ರನ ಮೇಲೆ ಇಸ್ರೋ ನೌಕೆ ಇಳಿಸಲಾಗಿತ್ತು, ಈ ಮೊದಲು ಅಮೆರಿಕ, ಚೀನಾ, ರಷ್ಯಾದಿಂದ ಈ ಮಹತ್ವದ ಸಾಧನೆಯಾಗಿತ್ತು ಇದೀಗ ಚಂದ್ರನ ಮೇಲೆ ಕಾಲಿಟ್ಟ 4ನೇ ದೇಶವೆಂಬ ಹೆಗ್ಗಳಿಕೆ ಭಾರತದ ಪಾಲಾಗಲಿದೆ.

ಚಂದ್ರಯಾನ-3ವಿಶೇಷತೆಗಳೇನು ?

ಶ್ರೀಹರಿಕೋಟಾದಿಂದ ಚಂದ್ರನ ಕಕ್ಷೆಗೆ ಇರುವ ದೂರ ಒಟ್ಟು 3,84,400 ಕಿ.ಮೀ ಗಳಾಗಿದೆ, ಚಂದ್ರಯಾನ ಯಾತ್ರೆಯ ರಾಕೆಟ್​ 42 ದಿನಗಳ ಕಾಲ ಕ್ರಮಿಕ್ರಮಿಸಲಿದೆ, ಆಗಸ್ಟ್‌ 23ರಂದು ಚಂದ್ರನ ಕಕ್ಷೆಗೆ ಮೇಲೆ ರೋವರ್​ ಇಳಿಯಲಿದೆ, ಚಂದ್ರನ ಮೇಲೆಳಿಯುವ ಸ್ಪೇಸ್​ ಕ್ರಾಫ್ಟ್​ ಯಂತ್ರದ ಒಟ್ಟಾರೆ ಭಾರ 2,148 ಕೆಜಿ, ಲ್ಯಾಂಡರ್​ ಮಾಡ್ಯೂಲ್​ ವಿಕ್ರಮ್​ ಯಂತ್ರದ ಒಟ್ಟು ಭಾರ-1,752 ಕೆಜಿ,  ಚಂದ್ರನ ಮೇಲ್ಮೈ ಮೇಲೆ ಚಲಿಸುವ ರೋವರ್​ ಯಂತ್ರದ  ಭಾರ 26 ಕೆಜಿಗಳು ಎನ್ನಲಾಗಿದೆ.

RELATED ARTICLES

Related Articles

TRENDING ARTICLES