Wednesday, January 22, 2025

ಕಾಂಗ್ರೆಸ್ ನವರೇ ಇಷ್ಟು ಆತುರ ಏಕೆ? : ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು : ಕಾಂಗ್ರೆಸ್ ನವರೇ ಇಷ್ಟು ಆತುರ ಏಕೆ? ಪೆನ್ ಡ್ರೈವ್ ಖಾಲಿ ಇಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೌಂಟರ್ ಕೊಟ್ಟರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪೆನ್ ಡ್ರೈವ್ ಆಪರೇಷನ್ ಮಾಡಿದ ಸಿಡಿ ತರ ಅಲ್ಲ ಅದು. ಈ ಪೆನ್ ಡ್ರೈವ್ ಬೇರೆಯದ್ದು ಎಂದು ಕುಟುಕಿದರು.

ದಾಖಲೆ ಕೊಡಿ ಅಂದ್ರೆ ದುಡ್ಡು ಕೊಡಲು ಸಾಧ್ಯವಾ? ಇನ್ನೂ ಕಾದು ನೋಡಿ ಹಲವು ಬರ್ತವೆ ಅಂತ ಹೇಳಿದ್ದಾರೆ. ಸರ್ಕಾರದ ಸಾಫ್ಟ್ ಕಾರ್ನರ್ ಅಂದ್ರು. ಸಾಫ್ಟ್ ಕಾರ್ನರ್ ಆಗಿ ಹೇಳಿಲ್ಲ. ಇವರ ಸಮಸ್ಯೆ ಬಗ್ಗೆ ಎಲ್ಲವನ್ನೂ ಬಿಚ್ಚಿ ಹೇಳಿದ್ದೇನೆ. ಸಲಹೆಯನ್ನು ನೀಡಿದ್ದೇನೆ. ಸರಿಪಡಿಸಿಕೊಳ್ಳೋದಾದ್ರೆ ಸರಿಪಡಿಸಿಕೊಳ್ಳಲಿ ಎಂದು ಛೇಡಿಸಿದರು.

ಇದನ್ನೂ ಓದಿ : ಆರೋಪ ಸಾಬೀತಾದ್ರೆ ರಾಜಕೀಯದಿಂದಲೇ ನಿವೃತ್ತಿ ಆಗ್ತೀನಿ : ಸಿದ್ದರಾಮಯ್ಯ

ನನ್ನ ಕೆಲಸ ನಾನು ಮಾಡ್ತಿದ್ದೇನೆ

ಕಾಂಗ್ರೆಸ್ ನವರಿಗೆ ಇನ್ನೂ ಕೆಲ ವಿಕೆಟ್ ಬೀಳಲಿ ಅಂತ ಹೇಳ್ತಿದ್ದಾರೆ. ನಾನು ಪ್ರಚೋಧನೆಗೆ ಒಳಗಾಗಲ್ಲ. ನಾನು ಎಂದೂ ಹಿಟ್ ಆಂಡ್ ರನ್ ಮಾಡಿಲ್ಲ. ಈ ದೇಶದ ವ್ಯವಸ್ಥೆ ನೋಡಿದ್ದೇವೆ. ನನ್ನ ಕೆಲಸ ನಾನು ಮಾಡ್ತಿದ್ದೇನೆ. ನಾನು ಸರ್ಟಿಫಿಕೇಟ್ ಪಡೆಯಬೇಕಿಲ್ಲ ಎಂದು ಕುಮಾರಸ್ವಾಮಿ ಚಾಟಿ ಬೀಸಿದರು.

ಕಾಂಗ್ರೆಸ್ ಸರ್ಕಾರ ಐದು ವರ್ಷ ಇರುತ್ತೆ ಅನ್ನೋ ವಿಚಾರವಾಗಿ ಮಾತನಾಡಿ, ಐದು ವರ್ಷ ಇದೆ ಅಂದೆ. ಅದನ್ನು ಉಳಿಸಿಕೊಂಡು ಹೋಗೋದು, ಬಿಡೋದು ಅವರಿಗೆ ಬಿಟ್ಟ ವಿಚಾರ ಎಂದು ನಯವಾಗಿಯೇ ಕಾಲೆಳೆದರು.

RELATED ARTICLES

Related Articles

TRENDING ARTICLES