Thursday, December 19, 2024

ತಂಗಿಯ ಬರ್ತ್​​​ಡೇಗೆ ಟೊಮ್ಯಾಟೋ ಗಿಫ್ಟ್​​​​..! : ಕಾಸ್ಟ್ಲಿಗಿಫ್ಟ್​ ಪಡೆದ ಬರ್ತ್​​​ಡೇ ಗರ್ಲ್​​ ಹೇಳಿದ್ದೇನು?

ಬೆಂಗಳೂರು: ಹುಟ್ಟುಹಬ್ಬಕ್ಕೆ ನಾವು ಉಡುಗೊರೆಯಾಗಿ ಹೂವು, ಟೆಡ್ಡಿ ಬೇರ್, ಚಾಕೊಲೇಟ್, ಕಾಸ್ಟ್ಲಿಗಿಫ್ಟ್​ ಕೊಡುವುದನ್ನೂ ನೋಡಿದ್ದೇವೆ. ಇಲ್ಲವಾದರೆ ಬೆಳ್ಳಿ ಮತ್ತು ಚಿನ್ನವನ್ನು ಆಯಾ ಮಟ್ಟಕ್ಕೆ ಅನುಗುಣವಾಗಿ ಗಿಫ್ಟ್​ ಕೊಡಲು ಪ್ಲಾನ್​ ಮಾಡಿಕೊಂಡಿರುತ್ತಾವೆ. ಅಂದ್ರೆ ನೀವು ಯಾರಿಗದ್ರೂ ಟೊಮ್ಯಾಟೋ ಗಿಫ್ಟ್ ಕೊಟ್ಟಿದ್ದೀರಾ..? ಹಾಗಿದ್ರೆ ನೀವು ಸ್ಟೋರಿ ಓದಲೇ ಬೇಕು…

ನೀವು ಯಾರಿಗಾದರೂ ದುಬಾರಿ ಉಡುಗೊರೆಯನ್ನು ನೀಡಲು ಬಯಸಿದ್ದೀರಾ? ಹಾಗಿದ್ರೆ ಟೊಮ್ಯಾಟೋವನ್ನು ಕೊಡಬಹುದು ಎನ್ನುವುದನ್ನು  ವ್ಯಕ್ತಿಯೊಬ್ಬರು ಸಾಬೀತು ಪಡಿಸಿದ್ದಾರೆ.

ಹೌದು, ಟೊಮ್ಯಾಟೋ ಬೆಲೆ ಏರಿಕೆ ಹಿನ್ನೆಲೆ, ಇದೀಗ ಮಹಾರಾಷ್ಟ್ರದಲ್ಲಿ ಸೋದರನೊಬ್ಬ ಸೋದರಿಯ ಹುಟ್ಟುಹಬ್ಬಕ್ಕೆ ಟೊಮ್ಯಾಟೋಗಳನ್ನು ಉಡುಗೊರೆಯಾಗಿ ಕೊಟ್ಟು ಆಕೆಗೆ ಅಚ್ಚರಿ ಮೂಡಿಸಿದ್ದಾನೆ.

ಇದನ್ನೂ ಓದಿ: ಟೊಮೆಟೊ, ಮೆಣಸಿನಕಾಯಿ ಬೆಲೆ ಕೇಳಿ ಜನ ತತ್ತರ!

ಕಲ್ಯಾಣದ ಕೊಚಾಡಿಯಲ್ಲಿ ಈ ಘಟನೆ ನಡೆದಿದ್ದು,ಸೋನಮ್​ ಬೋರ್ಸೆ ತನ್ನ ಸಹೋದರ ಮತ್ತು ಚಿಕ್ಕಮ್ಮ, ಚಿಕ್ಕಪ್ಪರಿಂದ ನಾಲ್ಕು ಕಿ.ಗ್ರಾಂ ನಷ್ಟು ಟೊಮ್ಯಾಟೋಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ.

ದೇಶಾದ್ಯಂತ ಜನರು ಟೊಮ್ಯಾಟೋ ಬೆಲೆ ಏರಿದ್ದನ್ನು ನೋಡಿ, ಟೊಮ್ಯಾಟೋ ತರುವುದನ್ನೇ ನಿಲ್ಲಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಒಂದು ಕೆಜಿಗೆ 140ರಿಂದ 180 ರೂಪಾಯಿ ಬೆಲೆ ಇದ್ದು, ಅದಕ್ಕೆ ಪ್ರತಿಕ್ರಿಯೆ ನೀಡಿರುವ ಸೋನಮ್​, ‘ನನ್ನ ಹುಟ್ಟುಹಬ್ಬಕ್ಕೆ ಏನೆಲ್ಲಾ ಉಡುಗೊರೆಗಳನ್ನು ಪಡೆದಿದ್ದೇನೆ. ಆದರೆ ಈವತ್ತಿನ ಈ ಉಡುಗೊರೆ ಮರೆಯಲಾರದಂಥದ್ದು, ನಾನು ತುಂಬಾ ಖುಷಿಗೊಂಡಿದ್ದೇನೆ’ ಎಂದಿದ್ದಾರೆ.

RELATED ARTICLES

Related Articles

TRENDING ARTICLES