Sunday, December 22, 2024

ಹೇ.. ರೇವಣ್ಣ ನಿಂಬೆಹಣ್ಣು ಬಿಟ್ಟು, ಕೊಬ್ಬರಿ ಜೊತೆ ಬಂದಿದ್ಯಾ? : ಸಿದ್ದರಾಮಯ್ಯ

ಬೆಂಗಳೂರು : ಕೊಬ್ಬರಿ ಬೆಲೆ ಏರಿಸುವಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಬೇಡಿಕೆ ಇಟ್ಟರು. ಈ ವೇಳೆ ಸದನಕ್ಕೆ ಕೊಬ್ಬರಿ ತೆಗೆದುಕೊಂಡು ಬಂದು ನಿಮ್ಮ ಉತ್ತರದಲ್ಲಿ ಇದನ್ನ ಘೋಷಣೆ ಮಾಡಿ ಎಂದು ಪಟ್ಟು ಹಿಡಿದರು.

ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡುವುದಕ್ಕೂ ಮುಂಚೆಯೇ ಹೆಚ್.ಡಿ ರೇವಣ್ಣ ಮಧ್ಯ ಪ್ರವೇಶ ಮಾಡಿದರು. ಈ ವೇಳೆ ಸಿದ್ದರಾಮಯ್ಯ, ಹೇ.. ರೇವಣ್ಣ ನಿಂಬೆಹಣ್ಣು ಬಿಟ್ಟು, ಕೊಬ್ಬರಿ ತೆಗೆದುಕೊಂಡು ಬಂದಿದ್ಯಾ? ಅಂತ ನಗೆ ಚಟಾಕಿ ಹಾರಿಸಿದರು.

ಇದೇ ವೇಳೆ ಸ್ಪೀಕರ್ ಯು.ಟಿ ಖಾದರ್, ಆ ಕೊಬ್ಬರಿ ಕಳುಹಿಸಿ ನೋಡೋಣ ಎಂದು ರೇವಣ್ಣಗೆ ಸೂಚಿಸಿದರು. ರೇವಣ್ಣಗೋಸ್ಕರ ಆದರೂ ಕೊಬ್ಬರಿ ಬೆಲೆ ಹೆಚ್ಚು ಮಾಡಬೇಕು. ಕನಿಷ್ಠ ರೇವಣ್ಣನಿಗಾದ್ರೂ ‌ಕೊಬ್ಬರಿ ಬೆಲೆ ಹೆಚ್ಚಿಸಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ : 

ರೇವಣ್ಣ ಗುಡ್ ಫ್ರೆಂಡ್ ಆಫ್ ಮೈ

ಸಿಎಂ ಸಿದ್ದರಾಮಯ್ಯ, ಆ ಕೊಬ್ಬರಿ ಕೊಡಿ ಹೇಗಿದೆ ನೊಡೋಣ. ರೇವಣ್ಣನ ಬಗ್ಗೆ ನನಗೆ ವಿಶೇಷ ಪ್ರೀತಿ. ಈ ವೇಳೆ ಗುಡ್ ಫ್ರೆಂಡ್ ಆಫ್ ಮೈ ಎಂದರು. ಈ ‌ವೇಳೆ ಸಾರ್.. ಕುಮಾರಣ್ಣನ ಬಗ್ಗೆ ಹೇಳಿ ಎಂದು ಬಿಜೆಪಿ ಶಾಸಕರು ಹೇಳಿದರು. ಬಿಜೆಪಿ ಶಾಸಕರೂ ಸಹ ನಿಂಬೆ ಹಣ್ಣು ಕಾಣ್ತಿಲ್ಲವೆಂದು ಲೇವಡಿ ಮಾಡಿದರು.

ಹಳೆ ಮೈಸೂರು ಭಾಗಕ್ಕೆ ಹೋಗಲಿಲ್ಲ

ಶಾಸಕ ಶಿವಲಿಂಗೇಗೌಡ ಮಾತನಾಡಿ, 1,700 ರೂ. ಹೆಚ್ಚಿಸಿದ್ದಾರೆ ಎಂದರು. ಆಗ ರೇವಣ್ಣ, ಈಗ ಹೆಚ್ಚಿಸಿರೋದನ್ನ ಗ್ಯಾರೆಂಟಿ ಮಾಡಿ. ಬಡವರು ಕಣ್ಣೀರು ಹಾಕ್ತಿದ್ದಾರೆ ಗ್ಯಾರೆಂಟಿ ಕೊಡಿ ಎಂದರು. ರೇವಣ್ಣ ಇರೋದೇ ನಿಮ್ಮನ್ನ ಹೊಗಳೋಕೆ ಎಂದು ಆರ್. ಅಶೋಕ್ ಹೇಳಿದರು. ನಾನು ಸಿದ್ರಾಮಣ್ಣನನ್ನ ಬೈಯ್ಯೋಕೆ ಹೋಗಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನಾಡೋಕೆ‌ ಹೋಗಲ್ಲ ಎಂದು ಅಶೋಕ್ ಮಾತಿಗೆ ರೇವಣ್ಣ ಉತ್ತರಿಸಿದರು. ಅದಕ್ಕೆ ಸಿದ್ರಾಮಣ್ಣ ಹಳೆ ಮೈಸೂರು ಭಾಗಕ್ಕೆ ಹೋಗಲಿಲ್ಲ ಎಂದು ಅಶೋಕ್ ಟಾಂಗ್ ಕೊಟ್ಟರು.

RELATED ARTICLES

Related Articles

TRENDING ARTICLES