Wednesday, January 22, 2025

ಹಳೆ ಕಾರು ಮಾರಾಟ ಮಳಿಗೆಯಲ್ಲಿ ಖದೀಮರ ಕೈಚಳಕ

ಮಂಗಳೂರು : ಹಳೆ ಕಾರು ಮಾರಾಟ ಮಳಿಗೆಗೆ ಕನ್ನ ಹಾಕಿrಉವ ದುರ್ಷರ್ಮಿಗಳು, 15 ಲಕ್ಷ ರೂ. ಮೌಲ್ಯದ ಕಾರುಗಳನ್ನು ಕದ್ದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು ತಾಲೂಕಿನ ಹೊಸಬೆಟ್ಟು ಜಂಕ್ಷನ್ ಬಳಿ ಘಟನೆ ನಡೆದಿದೆ. ಅಬಿದ್ ಅಹಮ್ಮದ್ ಎಂಬವರಿಗೆ ಸೇರಿದ್ದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗೆ ತಡರಾತ್ರಿ ನುಗ್ಗಿ ಕಳ್ಳರು ಕೈಚಳಕ ತೋರಿದ್ದಾರೆ.

ಹೆಲ್ಮೆಟ್ ಹಾಗೂ ರೈನ್ ಜಾಕೆಟ್ ಹಾಕಿ ಒಳ ಪ್ರವೇಶಿಸಿದ್ದ ಕಳ್ಳರು, ಕಚೇರಿಯ ಡ್ರಾವರ್​ನಲ್ಲಿದ್ದ ಕಾರುಗಳ ಕೀ ತೆಗೆದುಕೊಂಡು ಮಳಿಗೆ ಮುಂದೆ ಮಾರಾಟಕ್ಕೆಂದು ನಿಲ್ಲಿಸಿದ್ದ ಎರಡು ಬೆಲೆಬಾಳುವ ಕಾರುಗಳನ್ನು ಕದ್ದೊಯ್ದಿದ್ದಾರೆ.

ಇದನ್ನು ಓದಿ : ಅನ್ನಭಾಗ್ಯ ಯೋಜನೆಯಲ್ಲ ಇದು ಕನ್ನ ಭಾಗ್ಯ : ಮಾಜಿ ಸಿಎಂ ಬೊಮ್ಮಾಯಿ ಕಿಡಿ

6 ಲಕ್ಷ ಮೌಲ್ಯದ ಸ್ವಿಫ್ಟ್ ಕಾರು, 9 ಲಕ್ಷ ಮೌಲ್ಯದ ಕ್ರೆಟಾ ಕಾರು ಕಳ್ಳತನ ಮಾಡಿದ್ದಾರೆ. ಇದಲ್ಲದೆ, ಕಚೇರಿ ಒಳಗಿದ್ದ ಲ್ಯಾಪ್ ಟಾಪ್, ಪ್ರಿಂಟರ್, ಮೊಬೈಲ್, ಕಾರುಗಳ ದಾಖಲೆಗಳನ್ನು ಕಳವು ಮಾಡಿದ್ದಾರೆ. ಖದೀಮರ ಕೈಚಳಕ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಸಂಬಂಧ ಮಾಲೀಕ ಅಬಿದ್ ಅಹಮ್ಮದ್ ನೀಡಿದ ದೂರಿನ ಮೇರೆಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖದೀಮರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES

Related Articles

TRENDING ARTICLES