ಬೆಂಗಳೂರು : ಏಕೆ ಬಿಜೆಪಿಯವರ ಜೊತೆ ನೀವು ಸೇರಿಕೊಂಡಿದ್ದೀರಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಟಕ್ಕರ್ ಕೊಟ್ಟರು.
ಸಿದ್ದರಾಮಯ್ಯ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಕೇಳಿದ್ರೆ 5 ವರ್ಷ ಮುಖ್ಯಮಂತ್ರಿ ಆಗಿರುತ್ತಿದ್ದೆ ಎಂದು ಚಾಟಿ ಬೀಸಿದರು.
2019ರಲ್ಲಿ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ಮೋದಿ ಅವರು ನನ್ನನ್ನು ಕರೆದು ಮಾತನಾಡಿದ್ದರು. ನನ್ನ ಜೊತೆ 1 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದರು. ಮುಂದಿನ 4 ವರ್ಷ ಯಾವುದೇ ಸಮಸ್ಯೆ ಇರಲ್ಲ, ಸರ್ಕಾರಕ್ಕೆ ಬೆಂಬಲ ಕೊಡುತ್ತೇವೆ ಅಂತ ಆಫರ್ ನೀಡಿದ್ದರು. ಅವರ ಮಾತು ಕೇಳಿದ್ರೆ ಕಳೆದ 5 ವರ್ಷಗಳ ಪೂರ್ಣಾವಧಿಗೆ ನಾನೇ ಮುಖ್ಯಮಂತ್ರಿ ಆಗಿರುತ್ತಿದ್ದೆ ಎಂದು ಹಳೆ ವಿಷಯ ಕೆದಕಿದರು.
ಇದನ್ನೂ ಓದಿ : ಆರೋಪ ಸಾಬೀತಾದ್ರೆ ರಾಜಕೀಯದಿಂದಲೇ ನಿವೃತ್ತಿ ಆಗ್ತೀನಿ : ಸಿದ್ದರಾಮಯ್ಯ
ಮೋದಿ ಆಫರ್ ತಿರಸ್ಕಾರ ಮಾಡಿದ್ದೆ
ಲೋಕಸಭಾ ಚುನಾವಣೆಗಿಂತ 15 ದಿನ ಮೊದಲು ಪ್ರಧಾನಿ ನರೇಂದ್ರ ಮೋದಿ ಜೊತೆ ಚರ್ಚೆ ನಡೆದಿತ್ತು. ಆದರೆ, ನಾನು ಅವರ ಆಹ್ವಾನವನ್ನು ತಿರಸ್ಕಾರ ಮಾಡಿದೆ. ನಮ್ಮ ಸರ್ಕಾರಕ್ಕೆ ಕಪ್ಪು ಚುಕ್ಕೆ ಬರಬಾರದು ಅಂತ ನಿಮ್ಮ ಜೊತೆ ಮುಂದುವರಿದಿದ್ದೆ. ಅವರ ಮಾತು ಕೇಳಿದ್ದರೆ 5 ವರ್ಷ ಮುಖ್ಯಮಂತ್ರಿ ಆಗಿರುತ್ತಿದ್ದೆ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.
ನಾವೂ ರಾಜಕೀಯದಲ್ಲಿ ಉಳಿಯಬೇಕಲ್ವೇ?
ಪದೇ ಪದೆ ಕಾಂಗ್ರೆಸ್ಸಿಗರು ನಮ್ಮನ್ನು ಬಿಜೆಪಿ ಬಿ ಟೀಂ.. ಬಿ ಟೀಂ.. ಅಂತ ಹೇಳ್ತಿದ್ದೀರಿ. ನೀವೇ ನಮ್ಮನ್ನು ಬಿಜೆಪಿ ಕಡೆ ತಳ್ಳುತ್ತಿದ್ದೀರಿ. ನಾವೂ ರಾಜಕಾರಣದಲ್ಲಿ ಉಳಿಯಬೇಕಲ್ವೇ? ನಾವು ಆ ರೀತಿಯ ರಾಜಕಾರಣ ಮಾಡೋದಾದ್ರೆ ಡೈರೆಕ್ಟ್ ಆಗಿಯೇ ಮಾಡ್ತೀವಿ ಎಂದು ಕಾಂಗ್ರೆಸ್ಸಿಗರಿಗೆ ತಿರುಗೇಟು ಕೊಟ್ಟರು.