Wednesday, January 22, 2025

ಡಬಲ್ ಮರ್ಡರ್ ಮಾಡಿ ಸಿನಿಮಾ ಸ್ಟೈಲ್ ನಲ್ಲಿ ಬಿಲ್ಡಪ್ ಕೊಟ್ಟಿದ್ದ ಫಿಲಿಕ್ಸ್ ಬಂಧನ

ಬೆಂಗಳೂರು: ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸಿದ್ದ ಡಬಲ್ ಮರ್ಡರ್ ಕೇಸ್ ಆರೋಪಿಗಳನ್ನ ಅಮೃತಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹೌದು, ಈತ ಕೊಲೆಗೂ ಮುನ್ನ ಬಿಲ್ಡಪ್ ಸ್ಟೇಟಸ್ ಹಾಕಿದ್ದ ಕೊಲೆ ನಡೆದ ನಾಲ್ಕ ಗಂಟೆಯ ಬಳಗೆ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಇವನು ಕೊಲೆ ಮಾಡಿದ ನಂತರವೂ ಇನ್ ಸ್ಟಾಗ್ರಾಂನಲ್ಲಿ ಬಿಲ್ಡಪ್ ರೀಲ್ಸ್ ಅಪ್ಲೋಡ್ ಮಾಡಿದ್ದಾನೆ.

ಇದನ್ನೂ ಓದಿ: ಹೆಂಡ್ತಿ ತವರು ಮನೆಗೆ ಹೋಗಿದ್ದಕ್ಕೆ ಗಂಡ ಆತ್ಮಹತ್ಯೆ

ಜೋಗಯ್ಯ ಸಿನಿಮಾದ “ಪೇಪರ್ ಮುಂದ್ಗಡೆ ಬರ್ಕೊ ಬೆಂಗ್ಳೂರ್ ನಂದು” ಅನ್ನೋ ಡೈಲಾಗ್ ಗೆ ರೌಡಿ ಈರುಳ್ಳಿ ಬಾಬು ಜೊತೆಗಿನ ಫೋಟೋ ಮತ್ತು ತನ್ನ ಫೋಟೋ ಹಾಕಿ ಬಿಲ್ಡಪ್ ಕೊಟ್ಟಿ,ಕೊಲೆ‌ ನಂತರ ನ್ಯೂಸ್ ಹೆಡ್’ಲೈನ್ಸ್ ಇನ್ ಸ್ಟಾಗ್ರಾಂ ಸ್ಟೋರಿ ಹಾಕಿದ್ದ ಫಿಲಿಕ್ಸ್, ಕೊಲೆ ಮಾಡಿ ಕುಣಿಗಲ್ ತಲುಪುತ್ತಿದ್ದಂತೆ ಪೊಲೀಸ ಸರೆಯಾಗಿದ್ದಾನೆ.

ಕೊಲೆ ಮಾಡಿ ಎಸ್ಕೇಪ್ ಆಗುತ್ತಿದ್ದ ಫಿಲಿಕ್ಸ್ ನಿರಂತರವಾಗಿ ಮೊಬೈಲ್ ಯೂಸ್ ಮಾಡುತ್ತಿದ್ದ. ಯಾವ ಯಾವ ನ್ಯೂಸ್ ನಲ್ಲಿ ಕೊಲೆ ಬಗ್ಗೆ ಸ್ಟೋರಿ ಬರುತ್ತಿದೆ ಎಂದು ನೋಡುತ್ತಿದ್ದ. ಅಷ್ಟೇ ಅಲ್ಲದೆ, ಇನ್ ಸ್ಟಾಗ್ರಾಂನಲ್ಲಿ ಆಗಾಗ ಸ್ಟೇಟಸ್ ಕೂಡ ಅಪ್ಡೇಟ್ ಮಾಡುತಿದ್ದರಿಂದ ಪೊಲೀಸರಿಗೆ ಕಿರಾತಕನನ್ನು ಪತ್ತೆ ಮಾಡಲು ಸಹಕಾರಿಯಾಗಿದೆ.

ಫಿಲಿಕ್ಸ್ ಜೊತೆಗೆ ವಿನಯ್ ರೆಡ್ಡಿ, ಶಿವು ಎಂಬುವವರನ್ನ ಸಹ ಪೊಲೀಸರು ಬಂಧಿಸಿದ್ದಾರೆ.

 

 

RELATED ARTICLES

Related Articles

TRENDING ARTICLES