ಬೆಂಗಳೂರು : ಈ ಸರ್ಕಾರ ಬಂದ ಮೇಲೂ ಸಾಬ್ರಿಗೆ ರಕ್ಷಣೆ ಇಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಕುಟುಕಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದಣಾ ನಿರ್ಣಯದ ಚರ್ಚೆ ಸಂದರ್ಭದಲ್ಲಿ ಅವರು ಮಾತನಾಡಿದರು.
ಹಾಸನ ಕಲಾ (ಆರ್ಟ್ಸ್) ಕಾಲೇಜಿನಲ್ಲಿ ಮುಸ್ಲಿಮರು ಎಂಬ ಕಾರಣಕ್ಕಾಗಿ ಪ್ರಾಂಶುಪಾಲ ಹುದ್ದೆ ಕೊಟ್ಟಿಲ್ಲ. ಮುಸ್ಲಿಂ ವ್ಯಕ್ತಿಗೆ ಸೀನಿಯಾರಿಟಿ ಇದ್ದರೂ ಅವರಿಗೆ ಹುದ್ದೆ ಕೊಟ್ಟಿಲ್ಲ. ಬದಲಾಗಿ ಜೂನಿಯರ್ ವ್ಯಕ್ತಿಗೆ ಹುದ್ದೆ ನೀಡಲಾಗಿದೆ ಎಂದು ವಿಷಾಧಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರದ ಪುಣ್ಯಕ್ಷೇತ್ರ : ಛಲವಾದಿ ನಾರಾಯಣಸ್ವಾಮಿ
ಸಾಬ್ರು ಇಷ್ಟೆಲ್ಲ ವೋಟು ಹಾಕಿದ್ದಾರೆ
ಇನ್ನೂ ಸಾಬ್ರಿಗೆ ರಕ್ಷಣೆ ಇಲ್ಲ. ಈ ಸರ್ಕಾರದ ಬಂದ ಮೇಲೂ ರಕ್ಷಣೆ ಇಲ್ಲ. ಈಗಲಾದರೂ ಸಾಬ್ರಿಗೆ ರಕ್ಷಣೆ ಕೊಡಿ. ಸಾಬ್ರು ಇಷ್ಟೆಲ್ಲ ನಿಮಗೆ ವೋಟು ಹಾಕಿದ್ದಾರೆ. ಸಚಿವರಿಗೆ ಸೂಚನೆ ನೀಡಬೇಕು. ಅದನ್ನು ಸರಿಪಡಿಸಿ ಎಂದು ಹೆಚ್.ಡಿ ರೇವಣ್ಣ ಆಗ್ರಹಿಸಿದರು.
ಮುದ್ರಣ ಶುಲ್ಕ ಪರಿಷ್ಕರಣೆ ಇಲ್ಲ
ಮುದ್ರಣ ಶುಲ್ಕ ಪರಿಷ್ಕರಣೆ ಮಾಡಲ್ಲ ಎಂದು ತುಳಸಿ ಮುನಿರಾಜು ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಉತ್ತರ ನೀಡಿದರು. ಜಮೀನನ ಮೌಲ್ಯ ಪರಿಷ್ಕರಣೆ ಮಾಡುತ್ತೇವೆ. ಕಳೆದ ನಾಲ್ಕೈದು ವರ್ಷದಿಂದ ಪರಿಷ್ಕರಣೆ ಆಗಿಲ್ಲ. ಗೈಡೆನ್ಸ್ ವಾಲ್ಯೂಗೂ ಮಾರ್ಕೆಟ್ ಗೂ ಸಾಕಷ್ಟು ವ್ಯತ್ಯಾಸ ಇರುತ್ತೆ. ಇದರಿಂದ ಒಂದಿಷ್ಟು ಹಣ ಕೊಟ್ಟು ಆಮೇಲೆ ಬ್ಲ್ಯಾಕ್ ನಲ್ಲಿ ಹಣವನ್ನು ಕೊಡಲಾಗುತ್ತದೆ. ಹೀಗಾಗಿ, ಬ್ಲ್ಯಾಕ್ ಮನಿ ತಡೆಗಟ್ಟಲು ಗೈಡೆನ್ಸ್ ವ್ಯಾಲ್ಯೂ ಹೆಚ್ಚಳ ಮಾಡಲಾಗುತ್ತದೆ ಎಂದು ಹೇಳಿದರು.