ಬೆಂಗಳೂರು : ವಿಧಾನಸಭೆಯಲ್ಲಿ ಇಂದು ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಸದ್ದು ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಧ್ಯೆ ಜಟಾಪಟಿ ಜೋರಾಗಿತ್ತು.
ಶಾಸಕ ಯತ್ನಾಳ್ ಕಾಲೆಳೆದ ಸಿದ್ದರಾಮಯ್ಯ ಅವರು, ನನ್ನ ಮಾಹಿತಿ ಪ್ರಕಾರ ನಿಮ್ಮನ್ನು ವಿಪಕ್ಷ ನಾಯಕ ಮಾಡಲ್ಲ. ನೀವು ಪದೇ ಪದೆ ಮಾತನಾಡಿದ್ರೆ ಸಂಸದೀಯ ಪಟು ಆಗಲ್ಲ ಅಂತ ಪಂಚ್ ಕೊಟ್ಟರು.
ಇದಕ್ಕೆ ಪ್ರತಿಯಾಗಿ ಪದೇ ಪದೆ ಹೇಳ್ತಿದ್ದೀರಿ ಅಂದ್ರೆ, ನಾನೇ ವಿಪಕ್ಷ ನಾಯಕ ಆಗೋದು ಅಂತ ಯತ್ನಾಳ್ ಸಿದ್ದರಾಮಯ್ಯ ಕೌಂಟರ್ ಕೊಟ್ಟರು. ನಂತರ ನನಗಿರುವ ಮಾಹಿತಿ ಪ್ರಕಾರ ನಾನು ವಿಪಕ್ಷ ನಾಯಕ ಆಗಲ್ಲ ಎಂದು ತಿರುಗೇಟು ಕೊಟ್ಟರು.
ಇದನ್ನೂ ಓದಿ : ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರದ ಪುಣ್ಯಕ್ಷೇತ್ರ : ಛಲವಾದಿ ನಾರಾಯಣಸ್ವಾಮಿ
ನೀವೆಷ್ಟೇ ಬೆಂಕಿ ಹಚ್ಚಿದ್ರೂ ಹತ್ಕೊಳ್ಳಲ್ಲ
ಆರಗ ಜ್ಞಾನೇಂದ್ರ ಆಕಾಂಕ್ಷಿ ಅಲ್ಲ, ಡಾ.ಸಿ.ಎನ್ ಅಶ್ವತ್ಥನಾರಾಯಣ, ಬಸವರಾಜ ಬೊಮ್ಮಾಯಿ ಆಕಾಂಕ್ಷಿಗಳು. ನೀವೆಷ್ಟೇ ಬೆಂಕಿ ಹಚ್ಚಿದ್ರೂ ಹತ್ಕೊಳ್ಳಲ್ಲ. ನೀವು ನನಗೆ ಪದೇ ಪದೆ ವಿಪಕ್ಷ ನಾಯಕ ಆಗಲ್ಲ ಅಂತಿದ್ದೀರಿ. ಯಾರ ಜೊತೆಗೋ ಅಡ್ಜಸ್ಟ್‌ಮೆಂಟ್ ಮಾಡ್ಕೊಂಡಿದ್ದೀರಿ ಅಂತಾಯ್ತು ಎಂದು ಕುಟುಕಿದರು.
ನಾನು ಯಾರ ಜತೆಗೂ ಅಡ್ಜಸ್ಜ್‌ಮೆಂಟ್ ಪಾಲಿಟಿಕ್ಸ್ ಮಾಡಿಲ್ಲ. ಯಾರ ಜೊತೆಗಾದ್ರೂ ಅಡ್ಜಸ್ಟ್‌ಮೆಂಟ್ ಮಾಡಿದ್ರೆ ಸಾಬೀತು ಮಾಡಿ. ಸಾಬೀತು ಪಡಿಸಿದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೀನಿ ಎಂದು ಶಾಸಕ ಯತ್ನಾಳ್ ಅವರು ಸಿದ್ದರಾಮಯ್ಯಗೆ ಸವಾಲು ಹಾಕಿದರು.