Sunday, November 24, 2024

ರಾಜ್ಯದಲ್ಲಿ 200ಕ್ಕೂ ಹೆಚ್ಚು ರೈಲುಗಳಿಗೆ ಕಲ್ಲೆಸೆತ : 49 ಆರೋಪಿಗಳ ಬಂಧನ!

ಬೆಂಗಳೂರು: ಕಳೆದ ಒಂದು ವರ್ಷದಲ್ಲಿ ರಾಜ್ಯದ 200 ಕ್ಕೂ ಹೆಚ್ಚು ರೈಲುಗಳಿಗೆ ಕಲ್ಲೆಸೆತ, ವಂದೇ ಭಾರತ್​ ರೈಲಿಗೆ 24 ಬಾರಿ ಕಲ್ಲಿನದಾಳಿ ಘಟನೆಗಳು ನಡೆದಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಹೆಚ್​ಎಲ್​ ವಿಮಾನ ನಿಲ್ದಾಣದಲ್ಲಿ ಮುಗಚಿಬಿದ್ದ ವಿಮಾನ

ದಕ್ಷಿಣ ರೈಲ್ವೆಯ ದಕ್ಷಿಣ ಭಾರತದ ಮೊದಲ ‘ವಂದೇ ಭಾರತ್‌’ (ಚೆನ್ನೈ-ಮೈಸೂರು ) ರೈಲಿಗೆ ಬೆಂಗಳೂರು ವಲಯ ವ್ಯಾಪ್ತಿಯಲ್ಲೇ ಸುಮಾರು 21 ಬಾರಿ ಕಲ್ಲೇಟು ಬಿದ್ದಿದ್ದು, 25 ಗಾಜುಗಳು ಒಡೆದಿವೆ. ವಂದೇ ಭಾರತ್‌ನ ಒಂದು ಕಿಟಕಿ ಗಾಜು ಒಡೆದರೆ ಅದರ ಬದಲಾವಣೆಗೆ ಸುಮಾರು 15-18 ಸಾವಿರ ಖರ್ಚು ತಗುಲುತ್ತಿದೆ.

ಚೆನ್ನೈ-ಮೈಸೂರು ವಂದೇ ಭಾರತ್‌ ರೈಲಿಗೆ 21 ಬಾರಿ, ಬೆಂಗಳೂರು-ಧಾರವಾಡ ವಂದೇ ಭಾರತ್‌ಗೆ 3 ಬಾರಿ, ಇತರೆ ರೈಲುಗಳಿಗೆ ಒಟ್ಟು 190ಕ್ಕೂ ಹೆಚ್ಚು ಬಾರಿ ಕಲ್ಲೆಸೆತ ಘಟನೆಗಳು ನಡೆದಿದೆ.

ರಾಜ್ಯಾದ್ಯಂತ ರೈಲುಗಳಿಗೆ ಕಲ್ಲೆಸೆ ಪ್ರಕರಣಕ್ಕೆ ಸಂಭಂದಿಸಿ ಒಟ್ಟು 49 ದುಷ್ಕರ್ಮಿಗಳ ಬಂಧನ ಮಾಡಲಾಗಿದೆ. ರಾಜ್ಯದ ರೈಲ್ವೆ ವಲಯಗಳು ಕಲ್ಲೆಸೆತ ತಡೆಯಲು ಹೆಚ್ಚಿನ ಗಸ್ತು ತಂಡ ರಚನೆಗೆ ಸಿದ್ಧತೆ ಮಾಡಿಕೊಂಡಿದ್ದು ಈ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಿದೆ.

RELATED ARTICLES

Related Articles

TRENDING ARTICLES