ಬೆಂಗಳೂರು : ಸದನದಲ್ಲಿ ರಾಜ್ಯಪಾಲರ ಭಾಷಣದ ಚರ್ಚೆ ವೇಳೆ ಶಿವಮೊಗ್ಗ ಶಾಸಕ ಚನ್ನಬಸಪ್ಪ ಅವರು ಸಾವರ್ಕರ್ ವಿಚಾರ ಪ್ರಸ್ತಾಪಿಸಿದರು. ಆಗ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ ನಡೆಯಿತು.
ಆಗ ಮಧ್ಯೆ ಪ್ರವೇಶ ಮಾಡಿದ ಸ್ಪೀಕರ್ ಯು.ಟಿ ಖಾದರ್ ಅವರು, ಕಾಂಗ್ರೆಸ್ ಸದಸ್ಯರನ್ನು ಬಿಟ್ಟು ನನ್ನ ನೋಡಿ ಮಾತನಾಡಿ ಎಂದು ನೂತನ ಸದಸ್ಯರಿಗೆ ಕಿವಿಮಾತು ಹೇಳಿದರು.
ಮೊನ್ನೆ ಶಿಕ್ಷಣ ಸಚಿವರು ಮಾತನಾಡಿದ್ದಾರೆ. ಸಾವರ್ಕರ್ ಅವರನ್ನು ಕಿತ್ತು ಬಿಸಾಕಿದ್ದೇವೆ ಅಂದಿದ್ದಾರೆ. ಶಿಕ್ಷಣ ಸಚಿವರು ಉದ್ಧಟತನದ ಮಾತನಾಡಿದ್ದಾರೆ. ಒಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಶಾಸಕ ಚನ್ನಬಸಪ್ಪ ಗುಡುಗಿದರು. ಚನ್ನಬಸಪ್ಪ ಮಾತಿಗೆ ಕಾಂಗ್ರೆಸ್ ಸದಸ್ಯರ ಆಕ್ರೋಶ ವ್ಯಕ್ತಪಡಿಸಿದರು. ಈವೇಳೆ ಉಭಯ ಪಕ್ಷದ ಸದಸ್ಯರ ನಡುವೆ ಜಟಾಪಟಿ ನಡೆಯಿತು.
ಇದನ್ನೂ ಓದಿ : ವರ್ಗಾವಣೆ ದಂಧೆ ಲಿಸ್ಟ್ ತೋರಿಸಿ ಸರಿಪಡಿಸಿಕೊಳ್ಳಿ ಎಂದ ಕುಮಾರಸ್ವಾಮಿ
70% ಕಮಿಷನ್ ನಿಂದ ಅಧಿಕಾರಕ್ಕೆ ಬಂದ್ರು
ಅಲ್ಲಮ ಪ್ರಭು ಪಾಟೀಲ್ ಮಾತನಾಡಿ, ನಮ್ಮ ಸರ್ಕಾರ ಕಿತ್ತು ಹಿಂಬಾಗಿಲಿನಿಂದ ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ರು. 70% ಕಮಿಷನ್ ಮೂಲಕ ಅಧಿಕಾರಕ್ಕೆ ಬಂದವರು ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ರೋಶಗೊಂಡರು. ಮಾಜಿ ಸಚಿವ ಮುನಿರತ್ನ ಅವರು ಅಲ್ಲಮಪ್ರಭು ಪಾಟೀಲ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯ ಶ್ರೀಲಂಕಾ ಆಗುತ್ತೆ ಅಂದ್ರು
ನಿಮ್ಮ ದುರಡಳಿತದಿಂದ ಬೇಸತ್ತು ಕಾಂಗ್ರೆಸ್ ಗೆ ಅಧಿಕಾರ ಕೊಟ್ಟಿದ್ದಾರೆ. ನಾವು 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದಾಗ ರಾಜ್ಯ ಶ್ರೀಲಂಕಾ ಆಗುತ್ತೆ ಅಂದ್ರು. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ಇದರ ಬಗ್ಗೆ ಮಾತನಾಡ್ತೀರಲ್ಲ ಅಂತ ಮತ್ತೆ ಅಲ್ಲಮಪ್ರಭು ಪಾಟೀಲ್ ಬಿಜೆಪಿ ನಾಯಕಾರಿಗೆ ಟಕ್ಕರ್ ಕೊಟ್ಟರು.