ಬೆಂಗಳೂರು : ವರ್ಗಾವಣೆಗೆ ರೇಟ್ ಫಿಕ್ಸ್ ಮಾಡಿರುವ ದರ ಪಟ್ಟಿಯನ್ನು ಸದನದಲ್ಲಿ ಪ್ರದರ್ಶನ ಮಾಡಿ ಸರಿಪಡಿಸಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಶಾಕ್ ಕೊಟ್ಟರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಇಲಾಖಾವಾರು ವರ್ಗಾವಣೆಗೆ ಹಣ ನಿಗಧಿ ಮಾಡಿರುವ ಬಗ್ಗೆ ವರದಿ ಪತ್ರ ತೋರಿಸಿದರು.
ನನ್ನ ಫ್ರಾಂಕ್ ಅಭಿಪ್ರಾಯ. ಕೇವಲ ಒಂದುವರೆ ತಿಂಗಳಲ್ಲಿ ಬೀದಿಯಲ್ಲಿ ಚರ್ಚೆ ಆಗುತ್ತಿದೆ. ಸರಿಪಡಿಸಿಕೊಳ್ಳೋದು ನಿಮಗೆ ಸೇರಿದ್ದು. ಸರಿಪಡಿಸಿಕೊಳ್ಳದೇ ಇದ್ದರೆ ಜನರು ತೀರ್ಮಾನ ಮಾಡ್ತಾರೆ. ಎಲ್ಲದಕ್ಕೂ ದಾಖಲಾತಿ ತರೋಕೆ ಆಗುತ್ತಾ? ಎಂದು ಹೇಳಿದರು.
ಇದನ್ನೂ ಓದಿ : ಈ ಸರ್ಕಾರ ಬಂದ್ಮೇಲೂ ಸಾಬ್ರಿಗೆ ರಕ್ಷಣೆ ಇಲ್ಲ : ಹೆಚ್.ಡಿ ರೇವಣ್ಣ
ನಾನು ಶಾಸಕರಿಂದ ಸಿಎಂ ಆಗಿದ್ನಾ?
ಎಲ್ಲಿ? ಏನು ನಡೀದಿದೆ? ಅಂತ ಅಧಿಕಾರಿ ಕೊಟ್ಟಿರೋದು. ಅದನ್ನು ಮುಖ್ಯಮಂತ್ರಿಗಳಿಗೆ ಬೇಕಿದ್ರೆ ಕಳುಹಿಸ್ತೀನಿ. ನಮ್ಮ ಕುಟುಂಬಗಳಲ್ಲಿ ಇವೆಲ್ಲ ನೋಡಿದ್ದೇವೆ. ನನಗೆ ಅಧಿಕಾರ ಕೊಟ್ಟಿರೋದು ದೇವರು. ನಾನು ಶಾಸಕರಿಂದ ಸಿಎಂ ಆಗಿದ್ನಾ? ಏನು ನಮ್ಮ ಹಣೆಯಲ್ಲಿ ಏನು ಬರೆದಿರುತ್ತೋ ಹಾಗೇ ಆಗೋದು ಎಂದಿ ಮಾರ್ಮಿಕವಾಗಿ ನುಡಿದರು.
ಸ್ಪೀಕರ್ ಅವರಿಗೆ ವರ್ಗಾವಣೆ ದಂಧೆ ಲಿಸ್ಟ್ ಕಳುಹಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ಈ ವೇಳೆ ಬಿಜೆಪಿ ಶಾಸಕ ಯತ್ನಾಳ್ ಅವರು, ನಮಗೂ ಆ ಲಿಸ್ಟ್ ಕೊಡಿ. ಸ್ಟಾಕ್ ಎಕ್ಸ್ಚೇಂಜ್ ರೇಟ್ ಎಷ್ಟಿದೆ ನೋಡಬೇಕು ಅಂತ ಕೇಳಿದರು. ಆಯ್ತು ಕಳುಹಿಸಿ ಕೊಡುತ್ತೇನೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.