ಬೆಂಗಳೂರು : ಟ್ರೋಲ್ ಮಾಡುವವರ ಬಗ್ಗೆ ತೆಲೆಕೆಡಿಸಕೊಳ್ಳಬೇಡಿ. ಹೆದರಿಕೆ ಬೇಡ ಧೈರ್ಯವಾಗಿ ಮಾತನಾಡಿ ಎಂದು ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಸ್ಪೀಕರ್ ಯು.ಟಿ ಖಾದರ್ ಕಿವಿಮಾತು ಹೇಳಿದರು.
ನಾನು ಈ ಸ್ಪೀಕರ್ ಸ್ಥಾನದಲ್ಲಿ ಕೂರಲು ಟ್ರೋಲ್ ಮಾಡಿದವರು ಕಾರಣ. ಅವರು ನಮ್ಮ ಬೆಳವಣಿಗೆಗೆ ಕಾರಣ ಆಗ್ತಾರೆ. ಹೊಸದಾಗಿ ಶಾಸಕರಾದಾಗ ಮಾತನಾಡುವುದು ಸಹಜ. ಹೆದರಿಕೆ ಬೇಡ ಧೈರ್ಯವಾಗಿ ಮಾತನಾಡಿ ಎಂದು ನೂತನ ಶಾಸಕ ಪ್ರದೀಪ್ ಈಶ್ವರ್ ರನ್ನು ಹುರುದಿಂಬಿಸಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು, ನಾನು ಚಿಕಿತ್ಸೆ ಕೊಡಿಸಲಾಗದೆ ತಂದೆ-ತಾಯಿ ಕಳೆದುಕೊಂಡೆ. ಚಿಕಿತ್ಸೆಗೆ ಹಣವಿಲ್ಲದೆ ತಂದೆ-ತಾಯಿ ಕಳೆದುಕೊಳ್ಳಬೇಕಾಯ್ತು. ಚಿಕ್ಕವಯಸ್ಸಿನಲ್ಲೇ ಅನಾಥನಾದವನು ನಾನು ಎಂದು ಭಾವುಕರಾದರು.
ಇದನ್ನೂ ಓದಿ : ನೀವೆಷ್ಟೇ ಬೆಂಕಿ ಹಚ್ಚಿದ್ರೂ ಹತ್ಕೊಳ್ಳಲ್ಲ : ಸದನದಲ್ಲಿ ಸಿದ್ದರಾಮಯ್ಯ-ಯತ್ನಾಳ್ ಜಟಾಪಟಿ
ಸರ್ಕಾರಿ ಶಾಲೆಗಳಲ್ಲಿ ಮೆರಿಟ್ ಬರಲ್ಲ
ನಾನು ಕನ್ನಡ ಮಾಧ್ಯಮದಲ್ಲಿ ಓದಿದವನು. ಇಂದು ಸರ್ಕಾರಿ ಶಾಲೆಗಳ ಉನ್ನತೀಕರಣ ಆಗಬೇಕು. ಖಾಸಗಿ ಶಾಲೆಗಳಲ್ಲಿ ಮಕ್ಕಳು ಮೆರಿಟ್ ಬರ್ತಾರೆ. ಸರ್ಕಾರಿ ಶಾಲೆಗಳಲ್ಲಿ ಮೆರಿಟ್ ಬರಲ್ಲ. ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯ ಹೆಚ್ಚಾಗಬೇಕು ಎಂದು ಹೇಳಿದರು.
59 ಸಾವಿರ ಶುಲ್ಕ ಕಟ್ಟೋಕೆ ಆಗಲ್ಲ
ಸರ್ಕಾರಿ ಶಾಲೆ ಶಿಕ್ಷಕರು ಮೆರಿಟ್ ಮೇಲೆ ಆಯ್ಕೆಯಾಗುತ್ತಾರೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಹಿಂದೆ ಬೀಳ್ತಾರೆ. ಯಾಕಂದ್ರೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಬೇಕು. ಎಂಬಿಬಿಎಸ್ ಸೀಟು ಗಳಿಸಿದ್ರೆ ಶ್ರೀಮಂತರು ಶುಲ್ಕ ಕಟ್ಟುತ್ತಾರೆ. ಬಡವರ ಮಕ್ಕಳು 59 ಸಾವಿರ ರೂ. ಶುಲ್ಕ ಕಟ್ಟೋಕೆ ಆಗಲ್ಲ. ಹಾಗಾಗಿ, ಇದರ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಪ್ರದೀಪ್ ಈಶ್ವರ್ ತಿಳಿಸಿದರು.