Thursday, December 19, 2024

ಹೆಂಡ್ತಿ ತವರು ಮನೆಗೆ ಹೋಗಿದ್ದಕ್ಕೆ ಗಂಡ ಆತ್ಮಹತ್ಯೆ

ಉಡುಪಿ : ಹೆಂಡತಿ ತವರು ಮನೆಗೆ ಹೋಗಿದ್ದಳು ಎಂಬ ಕಾರಣಕ್ಕೆ ಮನನೊಂದ ಗಂಡ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಉಡುಪಿ ಜಿಲ್ಲೆಯ ಮಿಯ್ಯಾರು ಕುಂಟಿಬೈಲು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಹರೀಶ್ ಶೆಟ್ಟಿ (50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಗಂಡ ಹೆಂಡತಿ ನಡುವೆ ಜಗಳವಾಗಿತ್ತು. ಇದರಿಂದ ಹೆಂಡತಿ ಗಂಡನ ಮನೆ ಬಿಟ್ಟು ತವರು ಮನೆಗೆ ಹೋಗಿದ್ದಳು. ಮರಳಿ ಮನೆಗೆ ಬಾರದ ಕಾರಣ ಮೃತ ಹರೀಶ್ ಶೆಟ್ಟಿ ಮನನೊಂದಿದ್ದರು. ಇದೇ ಕಾರಣದಿಂದ ಬಾವಿಗೆ ಹಾರಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : ವಿದ್ಯುತ್ ಸ್ಪರ್ಶದಿಂದ ತಂದೆ, ಮಗಳು ದಾರುಣ ಸಾವು

ಹರೀಶ್ ಶೆಟ್ಟಿ ಇಂದು ಬೆಳ್ಳಗ್ಗೆ ತನ್ನ ಸ್ನೇಹಿತನನ್ನು ಭೇಟಿ ಮಾಡಿದ್ದರು. ಸ್ನೇಹಿತನ ಬಳಿ ಮನೆಯಲ್ಲಿ ಪತ್ನಿ ಜೊತೆಗಿನ ಜಗಳದ ಬಗ್ಗೆ ಹಂಚಿಕೊಂಡಿದ್ದರು. ಅಲ್ಲದೆ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ‌ಹರೀಶ್ ಹೇಳಿಕೊಂಡಿದ್ದರು ಎನ್ನಲಾಗಿದೆ.

ಸ್ನೇಹಿತನ ಭೇಟಿ ಬಳಿಕ ಹಿಂದಿರುಗಿದ ಹರೀಶ್ ಬಾವಿಗೆ ಹಾರಿ ‌ಆತ್ಮಹತ್ಯೆ ಶರಣಾಗಿದ್ದಾರೆ. ಮೃತ ಹರೀಶ್ ಖಾಸಗಿ ಬಸ್ ಒಂದರಲ್ಲಿ ಚಾಲಕರಾಗಿ ದುಡಿಯುತ್ತಿದ್ದನು. ರಿಕ್ಷಾ ಚಾಲಕರಾಗಿಯೂ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES