Wednesday, January 22, 2025

ಗಂಡ ಹೆಂಡತಿ ಜಗಳ: 8 ವರ್ಷದ ಕಂದಮ್ಮ ಸಾವು!

ಚಾಮರಾಜನಗರ : ಗಂಡ ಹೆಂಡತಿ ಜಗಳದಿಂದಾಗಿ ಎಂಟು ವರ್ಷದ ಬಾಲಕಿ ಸಾವಿಗೀಡಾಗಿದ್ದು ತಾಯಿ ಮತ್ತು ಒಂದು ಗಂಡು ಮಗುವಿನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಕೊಳ್ಳೇಗಾಲದ ಮದುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಜೈನಮುನಿ ಭೀಕರ ಹತ್ಯೆಗೆ ಖಂಡನೆ: ಜೈನ ಸಮುದಾಯ ಮೌನ ಪ್ರತಿಭಟನೆ

ಸಿಂಧು (8), ವರ್ಷದ ಬಾಲಕಿ ಸಾವಿಗೀಡಾದ ಮೃತ ದುರ್ದೈವಿ, ಪತ್ನಿ ಶೀಲ ಮತ್ತು ಪುತ್ರ ಯಶವಂತ್ (12) ಸ್ಥಿತಿ ಚಿಂತಾಜನಕವಾಗಿದ್ದು ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.

ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಗಂಡ ಮಾದೇಶನ ನಡೆಗೆ ಬೇಸತ್ತು ಪತ್ನಿ ಶೀಲ, ಇಂದು ತನ್ನ ಮಕ್ಕಳಿಬ್ಬರಿಗೆ ವಿಷವುಣಿಸಿದ್ದಾಳೆ. ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ, ಈವೇಳೆ  ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ 8 ವರ್ಷದ ಸಿಂಧು ಮಾರ್ಗಮಧ್ಯದಲ್ಲೇ ಕೊನೆಯುಸಿರೆಳಿದ್ದು ತಾಯಿ ಶೀಲ (25), ಮಗ ಯಶವಂತ್ (12) ನ ಸ್ಥಿತಿ ಗಂಭೀರವಾಗಿದೆ.  ಸಾವಿನ ಘಟನೆಯಿಂದಾಗಿ ಆಸ್ಪತ್ರೆ ಮುಂಭಾಗ ಮುಗಿಲುಮುಟ್ಟಿದ ಸಂಬಂಧಿಕರ ಆಕ್ರಂದನ, ಸ್ಥಳಕ್ಕೆ ಭೇಟಿ ನೀಡಿದ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES