Tuesday, January 7, 2025

ಹ್ಯಾಟ್ರಿಕ್​ ಹೀರೊ ಶಿವಣ್ಣನ 61 ನೇ ಹುಟ್ಟುಹಬ್ಬ; ಮುಗಿಲು ಮುಟ್ಟಿತು ಅಭಿಮಾನಿಗಳ ಸಂಭ್ರಮ   

ಬೆಂಗಳೂರು: ನಟ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅವರು ಜುಲೈ 11ರ ಮಧ್ಯರಾತ್ರಿ 61ನೇ ವರ್ಷದ ಜನ್ಮದಿನವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಂಡರು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದರು. ಸೆಲೆಬ್ರಿಟಿಗಳು, ಆಪ್ತರು, ಕುಟುಂಬದವರು ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಇದನ್ನೂ ಓದಿ: “ಅನ್ನ”ಭಾಗ್ಯ ಯೋಜನೆ: ಬ್ಯಾಂಕ್​ ಖಾತೆಗೆ ಹಣ ಜಮೆಯಾಗಿದೆಯಾ? ಹೀಗೆ ತಿಳಿಯಿರಿ

ಶಿವಣ್ಣನ ಜನ್ಮದಿನದ ಹಿನ್ನೆಲೆ ಅವರ ನಟನೆಯ ಹಲವು ಸಿನಿಮಾಗಳ ತಂಡದಿಂದ ಹೊಸ ಪೋಸ್ಟರ್​ ರಿಲೀಸ್​ ಆಗುವ ಸಾಧ್ಯತೆ ಹೆಚ್ಚಾಗಿದೆ. ಶಿವರಾಜ್​ಕುಮಾರ್ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಬ್ಯುಸಿಯಾಗಿದ್ದು ಇವರ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಹಾಗೂ ‘ಜೈಲರ್’ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿದೆ. ಇಂದು ಬೆಳಗ್ಗೆ 11:45ಕ್ಕೆ ‘ಘೋಸ್ಟ್​’  ಸಿನಿಮಾ ತಂಡದಿಂದ ‘ಬಿಗ್ ಡ್ಯಾಡಿ’ ವಿಡಿಯೋ ರಿಲೀಸ್​ ಆಗಲಿದೆ. ಇದಕ್ಕಾಗಿ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಅವರ ನಟನೆಯ ಇನ್ನೂ ಕೆಲವು ಸಿನಿಮಾಗಳ ತಂಡದಿಂದ ಹೊಸ ಅಪ್​ಡೇಟ್ ಸಿಗೋ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES