ಬೆಂಗಳೂರು: ನಗರವನ್ನು ಬೆಚ್ಚಿಬೀಳಿಸಿದ್ದ ಡಬಲ್ ಮರ್ಡರ್ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕುದ್ದು, ಪೊಲೀಸರ ವಿಚಾರಣೆ ವೇಳೆ ಹಂತಕರು ಸತ್ಯ ಬಾಯ್ಬಿಟ್ಟಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ 200ಕ್ಕೂ ಹೆಚ್ಚು ರೈಲುಗಳಿಗೆ ಕಲ್ಲೆಸೆತ : 49 ಆರೋಪಿಗಳ ಬಂಧನ!
ಏರೋನಿಕ್ಸ್ ಇಂಟರ್‌ನೆಟ್ ಕಂಪನಿ MD ಫಣೀಂದ್ರ ಮತ್ತು CEO ವಿನುಕುಮಾರ್ ಮೃತ ದುರ್ದೈವಿಗಳು, ಮಂಗಳವಾರ ಅಮೃತಹಳ್ಳಿ ಪಂಪಾ ಬಡಾವಣೆಯಲ್ಲಿ ಜೋಡಿ ಕೊಲೆ ನಡೆದಿದ್ದು, ಪ್ರಕರಣದ ಪ್ರಮುಖ ಆರೊಪಿಗಳಾದ ಜೋಕರ್ ಫಿಲಿಕ್ಸ್, ವಿನಯ್ ರೆಡ್ಡಿ, ಶಿವು ರನ್ನು ಘಟನೆ ನಡೆದ ಮೂರೆ ಗಂಟೆಗಳಲ್ಲಿ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದರು.
ಈ ಹಿಂದೆ, ಜಿ ನೆಟ್ ಕಂಪನಿಯಲ್ಲಿ ಫಣೀಂದ್ರ ಮತ್ತು ಹಂತಕ ಫಿಲಿಕ್ಸ್ ಕೆಲಸ ಮಾಡುತ್ತಿದ್ದಾಗ ಒಂದೇ ಹುಡುಗಿಯನ್ನು ಇಬ್ಬರು ಇಷ್ಟಪಟ್ಟಿದ್ದರು. ಹುಡುಗಿ ವಿಚಾರಕ್ಕೆ ಫಿಲಿಕ್ಸ್, ಫಣೀಂದ್ರ ಮಧ್ಯೆ ಗಲಾಟೆ ನಡೆದಿತ್ತು, ನಮ್ಮ ಹುಡ್ಗಿ ವಿಚಾರಕ್ಕೆ ಬಂದ್ರೆ ಮುಗಿಸಿಬಿಡ್ತೀನಿ ಎಂದು ಫಿಲಿಕ್ಸ್ ಆವಾಜ್ ಹಾಕಿದ್ದ, ಹಳೆ ದ್ವೇಶಕ್ಕೆ ಹತ್ಯೆ ಮಾಡಿದ್ದೇನೆ ಎಂದು ಹಂತಕ ತಪ್ಪೊಪ್ಪೊಕೊಂಡಿದ್ದಾನೆ. ಆದರೇ, ಫಣೀಂದ್ರನ ಹತ್ಯೆ ವೇಳೆ ತಡೆಯೋದಕ್ಕೆ ಬಂದ ವಿನುಕುಮಾರ್ ಹತ್ಯೆ ಮಾಡುವ ಯಾವ ಉದ್ದೇಶ ನಮಗೆ ಇರಲಿಲ್ಲ ಕೇವಲ ಪಣೀಂದ್ರ ಮೇಲೆ ಮಾತ್ರ ದ್ವೇಷ ಇತ್ತು ಎಂದು ಹಂತಕ ಬಾಯ್ಬಿಟ್ಟಿದ್ದಾನೆ.
ಸದ್ಯ ಆರೋಪಿಗಳ ವಿಚಾರಣೆ ಮುಂದುವರೆದಿದ್ದು ಮತ್ತಷ್ಟು ವಿಚಾರಗಳು ತನಿಖೆ ಬಳಿಕ ತಿಳಿದು ಬರಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.