Wednesday, January 22, 2025

“ಅನ್ನ”ಭಾಗ್ಯ ಯೋಜನೆ: ಬ್ಯಾಂಕ್​ ಖಾತೆಗೆ ಹಣ ಜಮೆಯಾಗಿದೆಯಾ? ಹೀಗೆ ತಿಳಿಯಿರಿ

ಬೆಂಗಳೂರು : ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಜೊತೆ ಹಣ ಭಾಗ್ಯಕ್ಕೆ ಚಾಲನೆ ದೊರೆತಿದ್ದು, ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆ ಪ್ರಕ್ರಿಯೆ ಆರಂಭವಾಗುತ್ತಿದೆ.

ಇದನ್ನೂ ಓದಿ: “ಅನ್ನ” ಭಾಗ್ಯ ಜೊತೆಗೆ “ಹಣ” ಭಾಗ್ಯ: 7.5 ಲಕ್ಷ ಜನರ ಖಾತೆಗೆ ಹಣ ಜಮೆ

ಹಾಗಾದರೇ ಅನ್ನ ಭಾಗ್ಯ ಯೋಜನೆ ಅಡಿ ನಿಮ್ಮ ಖಾತೆಗೆ ಹಣ ಜಮೆ ಆಗಿದಿಯ? ಹಣ ವರ್ಗಾವಣೆ ಆಗಿದ್ದಲ್ಲಿ ಅದರ ಮಾಹಿತಿ ಹೇಗೆ ಪಡೆದುಕೊಳ್ಳಬೇಕು ಗೊತ್ತಾ? ಹಾಗಾದರೇ ಇಂದೇ ಬಿಪಿಎಲ್ ಕಾರ್ಡ್ ದಾರರು ಅನ್ನಭಾಗ್ಯ ಯೋಜನೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ರಾಜ್ಯ ಸರ್ಕಾರದ ಆಹಾರ ಇಲಾಖೆಯ ಅಧಿಕೃತ ವೆಬ್​ಸೈಟ್​ https://ahara.kar.nic.in/status1/status_of_dbt.aspx ಈ ಲಿಂಕ್ ನಲ್ಲಿ ಅನ್ನಭಾಗ್ಯ ಯೋಜನೆ ಮಾಹಿತಿ ಲಭ್ಯವಾಗಲಿದೆ.  ಲಿಂಕ್ ಓಪನ್ ಮಾಡಿ ನಿಮ್ಮ ಖಾತೆ ಯಾವ ಸ್ಥಿತಿಯಲ್ಲಿದೆ ಅನ್ನೋದರ ಮಾಹಿತಿ ಪಡೆಯಬಹುದು.

ಲಿಂಕ್ ಓಪನ್ ಮಾಡಿ ಪಡಿತರ ಚೀಟಿಯಲ್ಲಿರುವ ಆರ್.ಸಿ ನಂಬರ್ ನಮೂದು ಮಾಡಬೇಕು. ಬಳಿಕ ಆರ್ ಸಿ ನಮೂದಿನ ನಂತರ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದಿಯಾ ಅಥವಾ ಇಲ್ಲವಾ? ಎಂಬುದರ ಮಾಹಿತಿ ಪಡೆಯಬಹುದು. ಒಂದು ವೇಳೆ ಇ -ಕೆ ವೈ ಸಿ ಆಧಾರ್ ಲಿಂಕ್ ಜೋಡಣೆ ಮುಂತಾದ ತೊಂದರೆ ಇದ್ದಲ್ಲಿ ಕೂಡಲೇ ಬ್ಯಾಂಕ್​ ಖಾತೆಗೆ ಆಧಾರ್​ ಲಿಂಕ್ ಮಾಡಬೇಕು, ಇ -ಕೆ ವೈ ಸಿ ಆಧಾರ್ ಲಿಂಕ್ ಜೋಡಣೆ ಆಗದಿದ್ದಲ್ಲಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಯಾವುದೇ ಕಾರಣಕ್ಕೂ ಆಗುವುದಿಲ್ಲ.

RELATED ARTICLES

Related Articles

TRENDING ARTICLES