Friday, April 25, 2025

ಸುಲಿಗೆ ಮಾಡುತ್ತಿದ್ದ ಮಂಗಳಮುಖಿಯರ ಗ್ಯಾಂಗ್ ಅರೆಸ್ಟ್

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಬೆಳ್ಳಂ ಬೆಳಗ್ಗೆಯೇ ಸುಲಿಗೆಗಿಳೀತಿದ್ದ ಮಂಗಳಮುಖಿಯರ ಗ್ಯಾಂಗ್ ಅರೆಸ್ಟ್ ಆಗಿದೆ.

ಬೆಳಗ್ಗೆ 5 ಗಂಟೆಗೆ ಆಟೋ ಹತ್ತಿದ್ರೆ ಮುಗೀತು. ರೌಂಡ್ಸ್ ಹಾಕಿ ಸುಲಿಗೆಗಳ ಮೇಲೆ ಸುಲಿಗೆ ಮಾಡುತ್ತಿದ್ದರು. ಇದೀಗ ಕೊಡಿಗೇಹಳ್ಳಿ ಪೊಲೀಸರಿಂದ ಸುಲಿಗೆ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್ ಆಗಿದೆ.

ಓರ್ವ ಆಟೋ ಡ್ರೈವರ್ ಮೂವರು ಮಂಗಳಮುಖಿಯರು ಸೇರಿ ನಾಲ್ವರು ಅರೆಸ್ಟ್ ಆಗಿದ್ದಾರೆ. ಸ್ನೇಹ, ಅವಿಷ್ಕಾ, ದೀಪಿಕಾ ಪ್ರಕಾಶ್ ಬಂಧಿತ ಆರೋಪಿಗಳಾಗಿದ್ದಾರೆ. ಬೆಳಗ್ಗೆ 5ಗಂಟೆಯಿಂದ 8ಗಂಟೆವರೆಗೆ ಫಿಲ್ಡ್​ನಲ್ಲಿ ಆ್ಯಕ್ಟೀವ್ ಆಗಿರುತ್ತಿದ್ದರು.

ಇದನ್ನೂ ಓದಿ : ಶಿವಾಜಿನಗರ: ಹುಸಿಬಾಂಬ್​ ಕರೆ ಆರೋಪಿ ಬಂಧನ

ಟೆಕ್ಕಿಗಳೇ ಇವ್ರ ಟಾರ್ಗೆಟ್

ಬೆಳಗ್ಗೆ ಕೆಲಸಕ್ಕೆ ಹೋಗುವ ಟೆಕ್ಕಿಗಳು, ರಸ್ತೆಬದಿ ಹೋಗುವ ಜನಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಹಣ ಕೇಳೋ ನೆಪದಲ್ಲಿ ಮಾತಾಡಿಸ್ತಿದ್ರು. ಅವ್ರ ಬಳಿ ಇರೋದೆಲ್ಲಾ ದೋಚ್ತಿದ್ರು. ಬೇರೆ ಬೇರೆ ಠಾಣಾ ವ್ಯಾಪ್ತಿಯಲ್ಲಿ ಕೂಡ ಕೃತ್ಯ ಎಸಗುತ್ತಿದ್ದರು.

ಇತ್ತೀಚೆಗೆ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು. ಈ ವೇಳೆ ರೆಡ್ ಹ್ಯಾಂಡ್ ಆಗಿ ಗ್ಯಾಂಗ್ ಅನ್ನ ಕೊಡಿಗೇಹಳ್ಳಿ ಪೊಲೀಸರು ಹಿಡಿದಿದ್ದಾರೆ.

RELATED ARTICLES

Related Articles

TRENDING ARTICLES