ಬೆಂಗಳೂರು: ನಾಲ್ಕು ವರ್ಷಗಳ ಬಳಿಕ ಮತ್ತೆ ನಗರದಲ್ಲಿ ಬೀದಿ ನಾಯಿಗಳ ಗಣತಿ ನಡೆಸುವುದಕ್ಕೆ ಬಿಬಿಎಂಪಿ ಮುಂದಾಗಿದೆ.
ಹೌದು,ರೇಬಿಸ್ ರೋಗ ತಡೆಗಟ್ಟಲು ಸಂತಾನ ಶಕ್ತಿ ಹರಣ ಚಿಕಿತ್ಸೆ ನೀಡಲು ಪಾಲಿಕೆ ಮುಂದದಾಗಿದ್ದು, ಇದಿನಿಂದ ಗಣತಿದಾರರು ಬೈಕ್ ಮೇಲೇರಿ ನಗರದ ಬೀದಿ ಬೀದಿ ಸುತ್ತಲಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರದ ಪಶುಪಾಲನೆ ವಿಭಾಗದಿಂದ 70 ಸಿಬ್ಬಂದಿ ಮತ್ತು ಬಿಬಿಎಂಪಿಯ 30 ಸಿಬ್ಬಂದಿ ಸೇರಿದಂತೆ ಒಟ್ಟು 100 ಮಂದಿ ನಿಯೋಜಿಸಲಾಗಿದೆ.
ಬಿಬಿಎಂಪಿ WVS ಸರ್ವೆ 2023 ಮೊಬೈಲ್ ಆ್ಯಪ್ ಮೂಲಕ ಬೀದಿ ನಾಯಿ ಸಮೀಕ್ಷೆ ನಡೆಸಲಾಗುತ್ತದೆ. ಮೊಬೈಲ್ ಆ್ಯಪ್‌ನಲ್ಲಿ ಬೀದಿ ನಾಯಿ ಫೋಟೋ ತಗೆದು ಫೋಟೋ ಅಪ್ಲೋಡ್ ಮಾಡಲಾಗುತ್ತದೆ.
ಇದನ್ನೂ ಓದಿ: ಮದುವೆ ಆರತಕ್ಷತೆಗೆ ತೆರಳಿದ್ದ ಬಸ್ ಭೀಕರ ಅಪಘಾತ:7 ಸಾವು, ಹಲವರಿಗೆ ಗಾಯ
ಇನ್ನೂ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಹಾಗೂ ರೇಬಿಸ್ ರೋಗ ತಡೆಗಟ್ಟಲು ಲಸಿಕಾ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಒಟ್ಟು 14 ದಿನಗಳ ಕಾಲ ಲಸಿಕಾ ಹಾಗೂ ಸರ್ವೇ ಕಾರ್ಯ ಮಾಡಲಾಗುತ್ತೆ. 2019ರಲ್ಲಿ ಬೀದಿ ನಾಯಿಗಳ ಸಮೀಕ್ಷೆಯನ್ನು ಮಾಡಿ ಅದರಲ್ಲಿ 3.10 ಲಕ್ಷ ಬೀದಿ ನಾಯಿಗಳು ಇರುವುದಾಗಿ ಅಂದಾಜು ದಾಖಲಾಗಿತ್ತು,
ಸದ್ಯ ಪಾಲಿಕೆಯ 08 ವಲಯಗಳಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟರೇಟೀಸ್ ಲಸಿಕಾ ಕಾರ್ಯಕ್ರಮ ನಡೆಯಲಿದೆ.