ಬೆಂಗಳೂರು : ಏಯ್ ಕೂತ್ಕೋಳಯ್ಯ ಸ್ವಲ್ಪ, ನಾಲಿಗೆ ಮೇಲೆ ಹಿಡಿತ ಇರಬೇಕು ಎಂದು ಶಾಸಕ ಯತ್ನಾಳ್ ವಿರುದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಏಕವಚನದಲ್ಲೇ ಆರೋಪ ಮಾಡಿದ ಪ್ರಸಂಗ ಇಂದಿನ ಸದನದಲ್ಲಿ ನಡೆಯಿತು.
ಇದನ್ನೂ ಓದಿ: ನನ್ನ ಕುರ್ಚಿ ವಾಸ್ತು ಸರಿ ಇದ್ಯಲ್ಲಾ? ಎಂದ ಸ್ಪೀಕರ್ : ಗೊಂದಲ ಇದ್ರೆ ರೇವಣ್ಣ ಹತ್ರ…
ಮಂಗಳವಾರ ವಿಧಾನಸಭೆ ಸದನದಲ್ಲಿ ನಡೆದ ವರ್ಗಾವಣೆ ವಿಚಾರದ ಚರ್ಚೆ ವೇಳೆ ಶಾಸಕ ಯತ್ನಾಳ್ ಭ್ರಷ್ಟಾಚಾರ ಮಾಡಿ ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದೀರಿ ಎಂಬ ಮಾತಿಗೆ ಪ್ರತಿಕ್ರಿಯೇ ನೀಡಿದ ಡಿ.ಕೆ.ಶಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದೇ ಯತ್ನಾಳ್, ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ, ಮಂತ್ರಿ ಹುದ್ದೆಗೆ 100 ಕೋಟಿ ಎಂದಿದ್ರು, ನಿಮ್ಮ ಮಾತುಗಳನ್ನು ಅಂದಿನ ನಿಮ್ಮ ಮುಖ್ಯಮಂತ್ರಿ ಕೇಳಿದ್ರು ಅಂತ ನಾವು ಕೇಳೋಕೆ ಸಿದ್ದ ಇಲ್ಲ, ನನ್ನಂತವನಾಗಿದ್ರೆ 24 ಗಂಟೆಯಲ್ಲಿ ಪಾರ್ಟಿಯಿಂದ ಡಿಸ್ಮಿಸ್ ಮಾಡ್ತಿದ್ದೆ ಎಂದು ಆಕ್ರೋಶದಿಂದ ವಾಗ್ದಾಳಿ ನಡೆಸಿದರು.
ನೀವು ಭ್ರಷ್ಟಾಚಾರದ ಬಂಡೆ ಎಂದು ಶಾಸಕ ಯತ್ನಾಳ್ ಡಿ.ಕೆ.ಶಿವಕುಮಾರ್ಗೆ ತಿರುಗೇಟು ನೀಡಿದರು. ಇದೇ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಿ ಏನ್ ಮಾಡ್ತಾರೆ ನೋಡೇ ಬಿಡೋಣ, ಅಧಿಕಾರ ಶಾಶ್ವತವಲ್ಲ ಎಂದು ಸರ್ಕಾರದ ವಿರುದ್ಧ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದರು.
ಈ ಮಾತಿಗೆ ಸಿಎಂ ಸಿದ್ದರಾಮಯ್ಯ ನೀವು ಸೋತಿದ್ದೀರೋದಕ್ಕೆ ಅಲ್ಲಿ ಹೋಗಿ ವಿರೋಧಪಕ್ಷದ ಸ್ಥಾನದಲ್ಲಿ ಕೂತಿರೋದು ಎಂದು ತಿರುಗೇಟು ನೀಡಿದರು, ಈ ವೇಳೆ ಬಿಜೆಪಿ ಶಾಸಕರು ಸದನದ ಬಾವಿಗೆ ಇಳಿದು ಕ್ಷಮಾಪಣೆ ಕೇಳುವಂತೆ ಪಟ್ಟು ಹಿಡಿದರು.
ಸದನದಲ್ಲಿ ಮಾತಿಗೆ ಮಾತಿ ಬೆಳೆದ ಹಿನ್ನೆಲೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ಸದನವನ್ನು ಮುಂದೂಡಿದರು.