Sunday, December 22, 2024

ಖ್ಯಾತ ವಿಜ್ಞಾನಿ ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್‌ಗೆ ಹೃದಯಾಘಾತ

ಬೆಂಗಳೂರು: ಭಾರತದ ಖ್ಯಾತ ವಿಜ್ಞಾನಿ ಹಾಗೂ ಇಸ್ರೋದ ಮಾಜಿ ಮುಖ್ಯಸ್ಥ ಡಾ ಕೆ ಕಸ್ತೂರಿ ರಂಗನ್‌ ಅವರಿಗೆ ಲಘು ಹೃದಯಾಘಾತವಾಗಿದೆ.

ಕಸ್ತೂರಿ ರಂಗನ್‌ ಶ್ರೀಲಂಕಾದ ಕೊಲಂಬೋಗೆ (Colombo SriLanka) ತೆರಳಿದ್ದ ವೇಳೆ ಕಸ್ತೂರಿ ಅವರಿಗೆ ಹೃದಯಾಘಾತವಾಗಿದೆ. ತಕ್ಷಣವೇ ಕೊಲಂಬೋದಿಂದ ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ (HAL Airport Bengaluru) ಕರೆತಂದು ನಾರಾಯಣ ಹೃದಯಾಲಯಕ್ಕೆ ದಾಖಲು ಮಾಡಲಿದ್ದಾರೆ.

ಇದನ್ನೂ ಓದಿ: ರಸ್ತೆ ಬದಿ ಕಸ ಸುರಿಯುವವರ ಮೇಲೆ ಬಿಬಿಎಂಪಿ ಸ್ಕ್ವಾಡ್‌ ನಿಗಾ..!

ಡಾ.ದೇವಿ ಶೆಟ್ಟಿ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪ್ರಸ್ತುತ ಅವರ ಆರೋಗ್ಯದ ಮೇಲೆ ಹೆಚ್ಚಿನ      ನಿಗಾ ಇರಿಸಲಾಗಿದೆ

83 ವರ್ಷ ವಯಸ್ಸಿನ ಕಸ್ತೂರಿ ರಂಗನ್‌ ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು ಲಭ್ಯಸಿವೆ.

 

 

RELATED ARTICLES

Related Articles

TRENDING ARTICLES