Wednesday, January 22, 2025

ಪವರ್​ಟಿವಿ ಇಂಪ್ಯಾಕ್ಟ್​: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮ,ಸಮಗ್ರ ತನಿಖೆಗೆ ಸರ್ಕಾರ ಆದೇಶ

ರಾಯಚೂರು: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ನಮ್ಮ ಪವರ್​ ಟಿವಿಯಲ್ಲಿ ವಿಸ್ತೃತ ವರದಿ ಬಂದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಅಕ್ರಮ ತನಿಖೆಗೆ ಆದೇಶಿಸಿದೆ.

ಇದನ್ನೂ ಓದಿ: ಖ್ಯಾತ ವಿಜ್ಞಾನಿ ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್‌ಗೆ ಹೃದಯಾಘಾತ

ರಾಯಚೂರಿನ ದೇವದುರ್ಗ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸಾಮಾಗ್ರಿಗಳನ್ನ ಪೂರೈಸುವ ನೆಪದಲ್ಲಿ ಕೋಟಿ ಕೋಟಿ ಹಣ ಲೂಟಿ ನಡೆದಿತ್ತು. 62 ಕೋಟಿ ರೂ. ಏಕೈಕ ವೆಂಡರ್‌ಗೆ ಪಾವತಿಸಿ ಅಕ್ರಮ ಎಸಗಲಾಗಿತ್ತು. ಈ ಬಗ್ಗೆ ಪವರ್ ಟಿವಿಯಲ್ಲಿ ವಿಸ್ತೃತ ವರದಿ ಬಿತ್ತರವಾದ ಬೆನ್ನಲ್ಲೇ ಸಮಗ್ರ ತನಿಖೆಗೆ ಸರ್ಕಾರ ಆದೇಶ ಮಾಡಿದೆ.

200ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಸಮಗ್ರ ತನಿಖೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದ್ದು ದೇವದುರ್ಗದ 33 ಗ್ರಾಮ ಪಂಚಾಯಿತಿಗಳಲ್ಲಿ ತನಿಖೆ ನಡೆಯಲಿದೆ. ಪ್ರತಿ ಪಂಚಾಯಿತಿಗೆ 7 ಅಧಿಕಾರಿಗಳ ತಂಡದಿಂದ ಲೆಕ್ಕ ಪರಿಶೋಧನೆ ನಡೆಯಲಿದೆ.

ಸರ್ಕಾರದ ತನಿಖೆ ಆದೇಶ ಹೊರಬಿದ್ದ ಬೆನ್ನಲ್ಲೇ ಸದ್ಯ ಉದ್ಯೋಗ್ಯ ಖಾತ್ರಿ ಯೋಜನೆ ಅಕ್ರಮದಲ್ಲಿ ಭಾಗಿಯಾಗಿ ಹಣ ನುಂಗಿದ ಅಧಿಕಾರಿಗಳಿಗೆ ನಡುಕ ಶುರುವಾಗಿದೆ.

RELATED ARTICLES

Related Articles

TRENDING ARTICLES