Sunday, November 24, 2024

ನಂದಿನಿ ಹಾಲಿನ ದರ ಏರಿಕೆ ಅನಿವಾರ್ಯ : ಸಚಿವ ವೆಂಕಟೇಶ್

ಬೆಂಗಳೂರು : ನಂದಿನಿ ಹಾಲಿನ ದರ ಏರಿಕೆ ಅನಿವಾರ್ಯ. ಸಿಎಂ ಜೊತೆ ಚರ್ಚೆ ಮಾಡಿ ಖರೀದಿ ದರ, ಮಾರಾಟ ದರದ ಬಗ್ಗೆ ತೀರ್ಮಾನ ಮಾಡ್ತೀವಿ ಎಂದು ಪಶುಸಂಗೋಪನಾ ಸಚಿವ ವೆಂಕಟೇಶ್ ಹೇಳಿದರು.

ವಿಧಾನ ಪರಿಷತ್ ನಲ್ಲಿ ಮಾತನಾಡಿದ ಅವರು, ಕೆಎಂಎಫ್‌ಗಿಂತ ಒಂದೆರಡು ರೂ. ಹೆಚ್ಚು ಕೊಟ್ಟು ಖರೀದಿ ಮಾಡ್ತಿದ್ದಾರೆ. ರೈತರನ್ನ ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಮಾರಾಟದ ಹಣದಲ್ಲಿ ಶೇ.80 ರಷ್ಟು ಹಣ ರೈತರಿಗೆ ಕೊಡುತ್ತಿದ್ದೇವೆ ಎಂದರು.

ಅಮುಲ್ ಜೊತೆ ನಂದಿನಿ ವಿಲೀನದ ಬಗ್ಗೆ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವ ವೆಂಕಟೇಶ್ ಅವರು, ಅಮೂಲ್ ಜೊತೆ ನಂದಿನಿ ವಿಲೀನ ಪ್ರಶ್ನೆಯೇ ಇಲ್ಲ. ಅವರು ನಮ್ಮನ್ನ ಕೇಳಿಲ್ಲ, ಆ ಪ್ರಸ್ತಾವನೆಯೂ ನಮ್ಮ‌ ಮುಂದಿಲ್ಲ. ಖಾಸಗಿ ಡೈರಿಗಳಿಂದ ಸ್ವಲ್ಪ ನಂದಿನಿಗೆ ಆಗಿರಬಹುದು ಎಂದು ಹೇಳಿದರು.

ಇದನ್ನೂ ಓದಿ : ಬೆಳಗ್ಗೆ 90, ಸಂಜೆ 90 ಫ್ರೀ ಎಣ್ಣೆ ಕೊಡಿ : ಉಡುಪಿಯಲ್ಲಿ ವಿಭಿನ್ನ ಪ್ರತಿಭಟನೆ

ಪ್ರೋತ್ಸಾಹ ಧನ ಏರಿಕೆ ಮಾಡಬೇಕು

ಹಾಲಿನ ಪ್ರೋತ್ಸಾಹ ಧನ ಹೆಚ್ಚಳದ ಬಗ್ಗೆ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆ ಮಾಡಿದರು. ಹಿಂದೆ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಅದನ್ನು ಇತ್ತೀಚೆಗೆ ತಡೆಹಿಡಿಯಲಾಗಿದೆ. ಪ್ರೋತ್ಸಾಹ ಧನ ಏರಿಕೆ ಮಾಡಬೇಕು. ಹಾಲು ಖರೀದಿ ದರ, ಮಾರಾಟ ದರ ಏರಿಕೆ ಮಾಡಬೇಕು. ಹಾಲು ಉತ್ಪಾದಕರಿಗೆ ಹೆಚ್ಚಿನ ಹಣ ತಲುಪುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಹಾಲಿನ ದರ ಹೆಚ್ಚಳಕ್ಕೆ ನಿರ್ಧಾರ

ನಂದಿನಿ ಹಾಲಿನ ದರವನ್ನು ಲೀಟರ್‌ಗೆ ‍5 ರೂ. ಹೆಚ್ಚಿಸಲು ಕೆಎಂಎಫ್ ತೀರ್ಮಾನಿಸಿದೆ. ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆದು ದರ ಹೆಚ್ಚಳಕ್ಕೆ ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಅನುಮತಿ ನೀಡಿದರೆ, ಹಾಲಿನ ದರ ಹೆಚ್ಚಾಗಲಿದೆ.

RELATED ARTICLES

Related Articles

TRENDING ARTICLES