ಬೆಂಗಳೂರು : ನನ್ನ ಪಕ್ಷದಲ್ಲಿ ಇದ್ದಿದ್ರೆ ಕಿತ್ತು ಹಾಕ್ತಿದ್ದೆ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಏರು ಧ್ವನಿಯಲ್ಲೇ ಕಿಡಿಕಾರಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ನನ್ನ ಪಕ್ಷದಲ್ಲಿ ಇದ್ರೆ ಕಿತ್ತು ಹಾಕ್ತೇವೆ ಅಂತಾರೆ. ಅವರ್ಯಾರಿ ನನ್ನ ಕಿತ್ತು ಹಾಕಲು ಎಂದು ಗುಡುಗಿದರು. ಯತ್ನಾಳರ್ ಮಾತಿನಿಂದ ಸದನದಲ್ಲಿ ಮತ್ತೆ ಗದ್ದಲ ಉಂಟಾಯಿತು.
ನಾನು ಅವಾಗಲೇ ಅಧಿಕಾರಿಗಳ ವರ್ಗಾವಣೆ ಬಗ್ಗೆ ಮಾತನಾಡಿದ್ದೆ. ರಾಜ್ಯದಲ್ಲಿ ವರ್ಗಾವಣೆ ಜನರಲ್ ಚರ್ಚೆ ಆಗುತ್ತಿದೆ. ಇದರ ಬಗ್ಗೆ ನಾನು ಮಾತನಾಡಿದ್ದೆ ಎಂದು ಯತ್ನಾಳ್ ಹೇಳಿದರು. ಯತ್ನಾಳ್ ಮಾತಿಗೆ ಕಾಂಗ್ರೆಸ್ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ : ಡಿಕೆಶಿ ರಾಜಾ ಹರಿಶ್ಚಂದ್ರನಿಗಿಂತ ಸತ್ಯವಂತರಿದ್ದಾರೆ : ಶಾಸಕ ಯತ್ನಾಳ್ ಪಂಚ್
‘ಕೈ’ ಸದಸ್ಯರ ಆಕ್ಷೇಪಕ್ಕೆ ಸ್ಪೀಕರ್ ಗರಂ
ಮತ್ತೆ ಸದನದಲ್ಲಿ ವಾಗ್ವಾದ ಶುರುವಾದಾಗ ಮಧ್ಯ ಪ್ರವೇಶಿಸಿದದ ಸ್ಪೀಕರ್ ಯು.ಟಿ ಖಾದರ್ ಕಾಂಗ್ರೆಸ್ ಸದಸ್ಯರ ಆಕ್ಷೇಪಕ್ಕೆ ಗರಂ ಆದರು. ಮೊದಲು ಕುಳಿತುಕೊಳ್ಳಿ, ಸಚಿವರು ಉತ್ತರ ಕೊಡ್ತಾರೆ ಎಂದು ಹೇಳಿದರು. ಯತ್ನಾಳ್ ಮೇಲೆಯೂ ಸ್ಪೀಕರ್ ಆಕ್ರೋಶಗೊಂಡರು.
ಕಾಂಗ್ರೆಸ್ ಸದಸ್ಯರ ಆಕ್ಷೇಪಕ್ಕೆ ಗರಂ
ಎಲ್ಲರೂ ಊಟ ಇಲ್ಲದೇ ಸದನದಲ್ಲಿದ್ದಾರೆ. ನೀವು ಒಬ್ಬ ಅಧಿಕಾರಿ ವರ್ಗಾವಣೆ ಹಿಡಿದು ಅದನ್ನೇ ಜಗ್ಗಾಡ್ತಿದ್ದೀರಿ. ಬೇರೆ ಕೆಲಸ ಇಲ್ವಾ ನಮಗೆ? ನಿಮ್ಮ ಒತ್ತಾಯ ಸೀಮಿತಗೊಳಿಸಿ ಮಾತನಾಡಿ. ವರ್ಗಾವಣೆ ವಾಪಸ್ ಮಾಡ್ಬೇಕಾ ಇಲ್ವಾ ಅಂತ ಹೇಳಿ ಎಂದು ಸ್ಪೀಕರ್ ಯು.ಟಿ ಖಾದರ್ ಪ್ರಶ್ನಿಸಿದರು.