ಬೆಂಗಳೂರು : ಮಾಜಿ ಸಿಎಂ ಫೋನ್ ಮಾಡಿದ್ದಾರೆ, ಅದರ ಅವಶ್ಯಕತೆ ಇರಲಿಲ್ಲ. ಆದ್ರೂ ಅವರು ಕೇಳಿದ್ದಾರೆ ಎಂದು ಹೆಚ್.ಡಿ ಕುಮಾರಸ್ವಾಮಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಮತ್ತೆ ಕೌಂಟರ್ ಕೊಟ್ಟರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಸ್ಸಾರ್ಟಿಸಿ ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ ಕುರಿತು ನಾನು ಸದನದಲ್ಲೇ ಎಲ್ಲಾ ವಿವರವಾಗಿ ಹೇಳಿದ್ದೇನೆ. ಈ ವಿಚಾರಕ್ಕೂ, ನನಗೂ ಸಂಬಂಧ ಇಲ್ಲ ಅಂತ ಎಂದರು.
ಮಾಜಿ ಸಿಎಂ ಅಲ್ಲಿ ವೆಂಟಿಲೇಟರ್ ಇದ್ಯಾ ಅಂತೆಲ್ಲಾ ಕೇಳಿದ್ದಾರೆ. ಲೋಕಲ್ ಲೀಡರ್ ಎಲ್ಲಾ ಮಾತಾಡಿದ್ದು, ಅವರ ಆಲೋಚನೆಯೇ ಬೇರೆ ರೀತಿ ಇದೆ ಅಂತ ಅರ್ಥವಾಗುತ್ತಿದೆ. ಡಾಕ್ಟರ್, ವೆಂಟಿಲೇಟರ್ ಇರೋ ಆಂಬ್ಯುಲೆನ್ಸ್ ಅನ್ನೇ ಕಳಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಮೂರು ಪಕ್ಷದವರು ಫಸ್ಟ್ ಬಾಯಿ ಮುಚ್ಚಿಕೊಂಡಿರಿ : ಮುತಾಲಿಕ್ ಗುಡುಗು
ಯಾರೂ ಆಂಬ್ಯುಲೆನ್ಸ್ ತಡೆಯಲ್ಲ
ರೋಗಿ ಹೋಗುವಾಗ ಯಾರೂ ಆಂಬ್ಯುಲೆನ್ಸ್ ತಡೆಯಲ್ಲ. ಆದ್ರೆ, ಡ್ರೈವರನ್ನೂ ಕೂಡ ಕೆಳಗೆ ಇಳಿಸಿ ಮಾತಾಡಿಸಿದ್ದಾರೆ. ರೋಗಿ ಇದ್ದಾಗ ಒಂದೊಂದು ನಿಮಿಷವೂ ಮುಖ್ಯ ಎಂದು ಸಚಿವ ಚಲುವರಾಯಸ್ವಾಮಿ ಕುಟುಕಿದರು.
ಪ್ರಕರಣ ಸಂಬಂಧ ಸಿಐಡಿ ತನಿಖೆ ನಡೆಯುತ್ತಿದೆ. ಅದರ ಬಗ್ಗೆ ಹೊರಗೆ ಮಾತನಾಡೋದು ಸರಿಯಲ್ಲ. ಶಾಸಕರು ಆಂಬ್ಯುಲೆನ್ಸ್ ತಡೆಯುವ ಕೆಲಸ ಮಾಡಬಾರದಿತ್ತು. ನಾನು ಅಂದೇ ಆತ್ಮಹತ್ಯೆ ಲೆಟರ್ ಬಗ್ಗೆ ಹೇಳಿದ್ದೆ. ಸದನ ಮುಗಿಯುವುದರೊಳಗೆ ಸಿಐಡಿ ತನಿಖೆ ವರದಿ ಬರಲಿದೆ ಎಂದು ಸ್ಪಷ್ಟನೆ ನೀಡಿದರು.