Monday, December 23, 2024

ಚುನಾವಣೆಯಲ್ಲಿ ವಾಮಮಾರ್ಗ ಹಿಡಿದ ಕಾಂಗ್ರೆಸ್ ಗೆದ್ದಿತು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ರಾಜಮಾರ್ಗ ಹಿಡಿದ್ದು ನಮ್ಮ ಬಿಜೆಪಿ ಪಕ್ಷ ಸೋತಿತು, ಅದರೆ ವಾಮಮಾರ್ಗದ ಮೂಲಕ ಅಧಿಕಾರ ಚುಕ್ಕಾಣಿಯನ್ನು ಕಾಂಗ್ರೆಸ್​ ಹಿಡಿತ್ತು ಎಂದು ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್​ ವಿರುದ್ಧ ಟೀಕೆ ಮಾಡಿದ್ದಾರೆ.

ಹೌದು,ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್​ ಸರ್ಕಾರ ಜನರಿಗೆ ಮೋಸ ಮಾಡಿದೆ. ನುಡಿದಂತೆ ನಡೆಯಲಿಲ್ಲ, ಇದು ವಚನಭ್ರಷ್ಟ ಸರ್ಕಾರ ಟೀಕಾಪ್ರಹಾರವನ್ನು ಛಲವಾದಿ ನಾರಾಯಣಸ್ವಾಮಿ ಶುರು ಮಾಡಿದ್ದರು.

ಇದನ್ನೂ ಓದಿ: Power Exclusive : ಬಿಡಿಎ ನುಂಗುಬಾಕ ಅಧಿಕಾರಿಗಳ ಅಟ್ಟಹಾಸಕ್ಕೆ ಫ್ಲ್ಯಾಟ್ ನಿವಾಸಿಗಳು ವಿಲವಿಲ

ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ನಮ್ಮ ಹಿರಿಯರು ಒಬ್ಬರ ಜೀವನದ ಉದ್ಧಾರಕ್ಕಾಗಿ ಸಾವಿರ ಸುಳ್ಳಿ ಹೇಳಿ ಒಂದು ಮದುವೆ ಮಾಡಿದರೆ ತಪ್ಪಿಲ್ಲ ಎಂದಿದ್ದಾರೆ. ಸಾವಿರ ಸುಳ್ಳು ಹೇಳಿ ಒಂದು ಸರ್ಕಾರ ತನ್ನಿ ಎಂದು ಎಲ್ಲೂ ಹೇಳಿಲ್ಲ ಎಂದು ಕಲಾಪದಲ್ಲಿ ಕಿಡಿಕಾರಿದ್ದಾರೆ.

ಸಾವಿರ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಇಂತಹ ಸರ್ಕಾರಕ್ಕೆ ಅಭಿನಂದನೆ ಹೇಳಬೇಕಿಲ್ಲ ಎಂದು ಕುಟುಕಿದರು. ಅಧಿಕಾರಕ್ಕೆ ಬರಲು ರಾಜ ಮಾರ್ಗವಿದೆ, ನ್ಯಾಯಮಾರ್ಗ, ನೀತಿಮಾರ್ಗ, ಧರ್ಮ ಮಾರ್ಗ ಎನ್ನುವ ಮಾರ್ಗಗಳಿವೆ. ನಾವು ರಾಜಮಾರ್ಗ ಹಿಡಿದೆವು ಎಂದರು.

 

 

RELATED ARTICLES

Related Articles

TRENDING ARTICLES