Wednesday, January 22, 2025

ನನ್ನ ಕುರ್ಚಿ ವಾಸ್ತು ಸರಿ ಇದ್ಯಲ್ಲಾ? ಎಂದ ಸ್ಪೀಕರ್ : ಗೊಂದಲ ಇದ್ರೆ ರೇವಣ್ಣ ಹತ್ರ ಕೇಳಿ ಎಂದ ಆರಗ

ಬೆಂಗಳೂರು: ವಿಧಾನಸಭೆಯ ಕಲಾಪ ಶುರುವಾಗುತ್ತಿದ್ದಂತೆ ನನ್ನ ಸ್ಥಾನ ವಾಸ್ತು ಪ್ರಕಾರ ಸರಿಯಾಗಿದೆ ಅಲ್ವಾ ಎಂದು ಸ್ಪೀಕರ್ ಯು ಟಿ ಖಾದರ್‌ ಪ್ರಶ್ನಿಸಿದರು. ಇದರ ಬಗ್ಗೆ ನಿಮಗೆ ಗೊಂದಲ ಇದ್ದರೆ ಎಚ್‌ ಡಿ ರೇವಣ್ಣ ಅವರ ಬಳಿ ಕೇಳಿ ಎಂದು ಮಾಜಿ ಸಚಿರ ಆರಗ ಜ್ಞಾನೇಂದ್ರ ಟಾಂಗ್​ ಕೊಟ್ರೂ ಇದರಿಂದ ಸದನದಲ್ಲಿ ನಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಇದನ್ನೂ ಓದಿ: ಬೀದಿಗಿಳಿದ ಪ್ರತಿಭಟನೆ ಮಾಡಿದ ಕಿಚ್ಚ ಸುದೀಪ್ ಅಭಿಮಾನಿಗಳು

ಈ ಇದೇ ವೇಳೆ ವಾಸ್ತು ಪ್ರಕಾರವಾಗಿ ಮುಚ್ಚಿರಬಹುದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದರು‌. ಅದಕ್ಕೆ ನನ್ನ ಸ್ಥಾನ ವಾಸ್ತು ಪ್ರಕಾರ ಸರಿಯಾಗಿದೆ ಅಲ್ವಾ ಎಂದು ಸ್ಪೀಕರ್ ತಮಾಷೆಯಾಗಿ ಪ್ರಶ್ನಿಸಿದರು. ಅದಕ್ಕೆ ನಿಮಗೆ ಗೊಂದಲ ಇದ್ರೆ ರೇವಣ್ಣ ಅವರನ್ನು ಕೇಳಿ ಎಂದು ಆರಗ ಜ್ಞಾನೇಂದ್ರ ಉತ್ತರಿಸಿದರು. ನಾನು ಖುಷಿಯಾಗಿದ್ರೆ ನೀವು ಖುಷಿ ಆಗಿರುತ್ತೀರಿ. ನಾನು ಖುಷಿಯಾಗಿದ್ದರೆ ನೀವು ಖುಷಿ ಆಗಿರುತ್ತೀರಿ ಎಂದು ಸ್ಪೀಕರ್ ಖಾದರ್ ಹೇಳಿದರು. ಸದನಕ್ಕೆ ನಗು ಮುಖದಲ್ಲೇ ಬಂದ ಖಾದರ್ ಅವರನ್ನು ಏನು ಖುಷಿ ಆಗಿದ್ದೀರಿ ಎಂದು ಸದಸ್ಯರು ಪ್ರಶ್ನಿಸಿದರು.

ಅದಕ್ಕೆ, ನಾನು ಟೆನ್ಸನ್ ನಲ್ಲಿದ್ರೆ ನೀವು‌ ಟೆನ್ಸನ್ ನಲ್ಲಿ ಇರ್ತೀರಾ. ನಾನು ಖುಷಿಯಾಗಿದ್ರೆ ನೀವು ಖುಷಿ ಆಗಿರ್ತೀರಿ. ಅದಕ್ಕಾಗಿ ನಾನು ಖುಷಿಯಿಂದ ಇದ್ದೇನೆ ಎಂದು ಖಾದರ್ ಕಲಾಪ ಶುರು ಮಾಡಿದರು.ಇನ್ನೂ ಸದನಕ್ಕೆ ನಿಗದಿತ ಸಮಯಕ್ಕೆ ಬಂದವರ ಹೆಸರನ್ನು ಯು ಟಿ ಖಾದರ್ ಓದಿದರು.

ಈ ವೇಳೆ ಮೊದಲು ಬಂದವರು ಯಾಕೆ, ಕೊನೆಯವರೆಗೂ ಇದ್ದವರು ಹೆಸರೇಳಿ. ನಾವು ಹಿಂದೆ ಕಾಲೇಜಿನಲ್ಲಿ ಹಾಜರಾತಿ ಹಾಕಿ, ಕ್ಲಾಸ್ ಗೆ ಚೆಕ್ಕರ್ ಹಾಕಿ ಹೋಗ್ತಿದ್ವಿ ಎಂದ ನಗೆ ಚಟಾಕಿಯನ್ನು ಶಾಸಕ ಸುರೇಶ್ ಕುಮಾರ್ ಹಾರಿಸಿದರು‌.

 

RELATED ARTICLES

Related Articles

TRENDING ARTICLES