Friday, November 22, 2024

ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ : ಕಾಂಗ್ರೆಸ್ ಮುಖಂಡರಿಗೆ ಹೊಸ ಟಾಸ್ಕ್ ಕೊಟ್ಟ ಡಿಕೆಶಿ

ಬೆಂಗಳೂರು: ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷೆಯುಳ್ಳ ಇಂದಿರಾ ಕ್ಯಾಂಟೀನ್​ನಲ್ಲಿ ಅವ್ಯವಸ್ಥೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಾರ್ಡ್ ಅಧ್ಯಕ್ಷರು, ಜಿಲ್ಲಾ ಪ್ರಮುಖರಿಗೆ ಕಡಿಕೆಶಿ ಶಿವಕುಮಾರ್​ ಹೊಸ ಟಾಸ್ಕ್​ ಕೊಟ್ಟಿದ್ದಾರೆ. 

ಇಂದಿರಾ ಕ್ಯಾಂಟೀನ್ ಗಳಲ್ಲಿ ದುಬಾರಿ ಹಣ ಸಿಬ್ಬಂದಿಗಳು ಪಡೆಯತ್ತಿರುವವರ ಮೇಲೆ ನಿಗಾ ಇಡಲು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಖಡಕ್ ಸೂಚನೆ ನೀಡಿದ್ದಾರೆ. ಇನ್ನೂ ಪ್ರತೀ ಕ್ಯಾಂಟೀನ್ ಗಳಲ್ಲಿ ತಿಂಡಿ, ಊಟ ಲಭ್ಯತೆ ಬಗ್ಗೆ ಮಾಹಿತಿ ನೀಡಲು ಡಿ.ಕೆ ಶಿವಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: Power Exclusive : ಬಿಡಿಎ ನುಂಗುಬಾಕ ಅಧಿಕಾರಿಗಳ ಹಟ್ಟಹಾಸಕ್ಕೆ ಫ್ಲ್ಯಾಟ್ ನಿವಾಸಿಗಳು ವಿಲವಿಲ

ನಾನು ಕಸ ಸಂಸ್ಕರಣಾ ಕೇಂದ್ರಕ್ಕೆ ಭೇಟಿ ಮಾಡಿದ್ದಿನಿ ಅಲ್ಲಿ ಬಿಬಿಎಂಪಿ ಅಧಿಕಾರಿಗಳು ಸ್ವಚ್ಛತೆ ಬಗ್ಗೆ ಪರಿಶೀಲನೆ ಮಾಡ್ತಿಲ್ಲ. ಕೆಲವರು ಫುಟ್‌ಪಾತ್‌ನಲ್ಲೇ ಕಸ ಸುರಿದು ಹೋಗ್ತಿದ್ದಾರೆ. ಅದೆಲ್ಲವನ್ನ ಆಯುಕ್ತರಿಗೆ ತೋರಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

ಇನ್ನೂ ಇಂದಿರಾ ಕ್ಯಾಂಟೀನ್​ನಲ್ಲಿ ಕೆಲವರು 5 ರೂ. ತಿಂಡಿಗೆ 10 ರೂ. ತೆಗೆದುಕೊಳ್ಳುತ್ತಿದ್ದಾರೆ. ಬಹಳ ವರ್ಷಗಳಿಂದ ಹೀಗೆ ನಡೆಯುತ್ತಿದೆ. ಎಲ್ಲವನ್ನೂ ರಿಪೇರಿ ಮಾಡ್ತಿನಿ ಎಂದು ಎಚ್ಚರವಹಿಸಿದ್ದಾರೆ. ಇಂದಿರಾ ಕ್ಯಾಂಟೀನ್‌ನಲ್ಲಿ ಕುಂದುಕೊರತೆ ಕುರಿತು ಸಾರ್ವಜನಿಕರು ದೂರು ಸಲ್ಲಿಸಲು ಪ್ರದರ್ಶಿಸಲಾದ ಸಹಾಯವಾಣಿ ಸಂಖ್ಯೆಗೆ ಸಚಿವರು ಕರೆ ಮಾಡಿದರು.

ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಆಗಿಂದಾಗ್ಗೆ ವರದಿ ಪಡೆಯುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಪಕ್ಷಭೇಧ ಮರೆತು ಜನರಿಗೆ ಗ್ಯಾರಂಟಿ ತಲುಪಿಸುವಂತೆ ಎಲ್ಲಾ ಸಹಕರಿಸಬೇಕು ಎಂದರು.

 

 

 

RELATED ARTICLES

Related Articles

TRENDING ARTICLES