ವಿಜಯಪುರ : ಕಳೆದೊಂದು ವಾರದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಆದರೆ, ಕೆಲವು ಜಿಲ್ಲೆಗಳಿಗೆ ಇನ್ನೂ ವರುಣನ ಆಗಮನವಾಗಿಲ್ಲ. ಹೀಗಾಗಿ, ಜನರು ದೇವರ ಮೊರೆ ಹೋಗಿದ್ದಾರೆ.
ಹೌದು, ಕೆಲ ರಾಜ್ಯಗಳಲ್ಲಿ ಭಾರೀ ಮಳೆಗೆ ಮನೆಗಳೇ ಕೊಚ್ಚಿ ಹೋಗುತ್ತಿದೆ. ಆದರೆ, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಮಳೆಯಿಲ್ಲದೆ ರೈತರು, ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಇದನ್ನು ಓದಿ : ಇಂದಿನಿಂದ ಬೀದಿ ನಾಯಿಗಳ ಸಮೀಕ್ಷೆ ಶುರು
ಮಳೆಗಾಗಿ ಗ್ರಾಮದ ರೈತರು ಪೂಜೆ ಪುನಸ್ಕಾರಗಳ ಮೂಲಕ ದೇವರ ಮೊರೆ ಹೋಗಿದ್ದಾರೆ. ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮಳೆಗಾಗಿ ಕತ್ತೆಗಳ ಮದುವೆ ಮಾಡಿದ್ದಾರೆ. ಆ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮುದುವೆ ಬಳಿಕ ಕತ್ತೆಗಳ ಮೆರವಣಿಗೆ
ಮದುವೆ ಕಾರ್ಯದ ಬಳಿಕ ಗ್ರಾಮಸ್ಥರು ಕತ್ತೆಗಳನ್ನು ಮೆರವಣಿಗೆ ಮಾಡಿದ್ದಾರೆ. ಮದುವೆ ಅಷ್ಟೇ ಅಲ್ಲದೆ ಅಲ್ಲಿ ನೇರದಿದ್ದ ಇಡೀ ಗ್ರಾಮಸ್ಥರಿಗೆ ಕೇಸರಿಬಾತ್ ಹಾಗೂ ಮಸಲಾ ರೈಸ್ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಒಟ್ನಲ್ಲಿ, ಮಳೆ ಬಾರದೆ ಇದ್ದರೆ ರೈತರು ಕಂಗಲಾಗುತ್ತಾರೆ. ಆ ಸಂದರ್ಭದಲ್ಲಿ ದೇವರ ಮೊರೆ ಹೋಗುತ್ತಾರೆ. ಕತ್ತೆಗಳ ಮದುವೆ ಮಾಡಿದರೆ ಮಳೆಯಾಗುತ್ತದೆ ಎಂಬುದು ಜನರ ನಂಬಿಕೆ. ಭತಗುಣಕಿ ಗ್ರಾಮದ ಜನರು ಇದೇ ಪದ್ಧತಿಯ ಮೊರೆ ಹೋಗಿದ್ದಾರೆ.