ಹುಬ್ಬಳ್ಳಿ : ವಿಧಾನಸಭೆಯಲ್ಲಿ ಮುಸ್ಲಿಂ ಸಮುದಾಯ ಪ್ರಾರ್ಥನೆ (ನಮಾಜ್) ಮಾಡಲು ಅವಕಾಶ ಕಲ್ಪಿಸಬೇಕು ಎಂಬ ಹೇಳಿಕೆಗೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯನ್ನು ಅವ್ರು ಮೆಕ್ಕಾ-ಮದೀನಾ ಅಂತ ತಿಳಿದುಕೊಂಡಿದ್ದೀರಾ ಎಂದು ಫುಲ್ ಗರಂ ಆದರು.
ಮುಸ್ಲಿಂ ಸಮುದಾಯ ವಿಧಾನಸಭೆಯಲ್ಲಿ ನಮಾಜ್ ಮಾಡಲು ಅವಕಾಶ ಕೊಡ್ಬೇಕು ಅಂತ ಕೇಳ್ತಾರೆ. ಪ್ರಜಾಪ್ರಭುತ್ವದ ದೇಗುಲ ವಿಧಾನಸಭೆ. ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಡಾ.ಬಿ.ಆರ್ ಅಂಬೇಡ್ಕರ್ ಸಂವಿಧಾನದಲ್ಲಿದ್ದೀರಿ ಅನ್ನೋದನ್ನ ನೆನಪಿಟ್ಟುಕೊಳ್ಳಿ. ನಾವು ಇದರ ಬಗ್ಗೆ ಹೋರಾಟ ಮಾಡ್ತೀವಿ ಎಂದು ಖಡಕ್ ಹೆಚ್ಚರಿಕೆ ನೀಡಿದರು.
ಇದನ್ನೂ ಓದಿ: ದಶಪಥ ಹೆದ್ದಾರಿಯ ನಿರ್ಮಾಣ ಸಮರ್ಪಕವಾಗಿಲ್ಲ : ಗೃಹ ಸಚಿವ ಡಾ.ಜಿ.ಪರಮೇಶ್ವರ್
ಕಾಂಗ್ರೆಸ್ನವ್ರು ಇನ್ನೂ ಪಾಠ ಕಲ್ತಿಲ್ಲ
ಇದೆ ಬಿಜೆಪಿ ಸರ್ಕಾರದಲ್ಲಿ ಗೋವನ್ನು ರಕ್ಷಣೆ ಮಾಡಲು ಹೋದ್ರೆ ರೌಡಿ ಶೀಟರ್ ಹಾಕ್ತಾರೆ. ಬಿಜೆಪಿ ಅವರು ಬೇರೆ ಏನಾದ್ರೂ ನಾಟಕ ಮಾಡ್ತಾರೆ. ಮುಸ್ಲಿಂ ಪರವಾಗಿನೇ ಕಾಂಗ್ರೆಸ್ ಇರೋದು. ಹಿಂದೂಗಳ ಹೆಸರು ಯಾಕೆ ಹೇಳಿದ್ರಿ? ಅವರು ನಮ್ಮ ಬ್ರದರ್ ಅಂತಾರೆ . ಈಗ ನಿಮ್ಮ ಬ್ರದರ್ ಕೊಂದು ಹಾಕಿದ್ದಾನೆ. ಕಾಂಗ್ರೆಸ್ನವರು ಇನ್ನು ಪಾಠ ಕಲ್ತಿಲ್ಲ, ನಾವು ಕಲಿಸ್ತೀವಿ ಎಂದು ಗುಡುಗಿದರು.
ನಾಳೆ ನಿಮ್ಮ ಮಠಕ್ಕೂ ಬರುತ್ತೆ
ಹಿಂದುಗಳನ್ನು ತುಳಿಯುವುದೇ ನಿಮ್ಮ ಕೆಲಸನಾ? ನೀವು ಹಿಂದುತ್ವ, ದೇಶದ ಸುರಕ್ಷತೆ ಬರಲ್ಲ. ನಾಳೆ ನಿಮ್ಮ ಮಠಕ್ಕೂ ಇದೆ ಪರಿಸ್ಥಿತಿ ಬರುತ್ತೆ. ಇಂದಿನ ಸರ್ಕಾರ ಬರದೇ ಇರೋ ಹಾಗೆ ಮಾಡ್ಬೇಕು. ಅದು ಎಚ್ಚರಿಕೆ ಘಂಟೆ ಆಗುತ್ತೆ. ಹಿಂದೂಗಳ ಮೇಲೆ ಹಲ್ಲೆ ಮಾಡುವುದೇ ಕಾಂಗ್ರೆಸ್ ಸರ್ಕಾರದ ನೀತಿ. ಬೆಳಗ್ಗೆ 5 ಗಂಟೆಗೆ ಕೂಗೋದು ಡಬಲ್. ಅವರ ದರ್ಪಕ್ಕೆ ಕಾಂಗ್ರೆಸ್ ಕುಮ್ಮಕ್ಕೂ ಕೊಡ್ತಾ ಇದೆ ಎಂದು ಆಕ್ರೋಶ ಹೊರಹಾಕಿದರು.