ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ ರಸ್ತೆಗಳಲ್ಲಿ ಅಪಘಾತಗಳು ಹೆಚ್ಚಳವಾಗುತ್ತಿರುವ ಬಗ್ಗೆ ಸದನದಲ್ಲಿ ಚರ್ಚೆಯಾಗುತ್ತಿದ್ದು, ಇದರ ವಿಚಾರವಾಗಿ ಶಾಸಕ ಸುರೇಶ್ ಕುಮಾರ್ ಪ್ರಶ್ನೆ ಕೇಳಿದರು. ಇದಕ್ಕೆ ಸಚಿವ ಡಾ.ಜಿ.ಪರಮೇಶ್ವರ್, ಹೆದ್ದಾರಿ ಸರಿಯಾಗಿ ಮಾಡಿಲ್ಲ ಅಂತಾ ಉತ್ತರ ನೀಡಿದ್ದಾರೆ.
ಹೌದು, ದಶಪಥ ರಸ್ತೆ ಬಹಳಷ್ಟು ನ್ಯೂನತೆಗಳೊಂದಿಗೆ ದಶಪಥ ನಿರ್ಮಾಣ ಮಾಡಲಾಗಿದೆ. ರಸ್ತೆ ತಿರುವುಗಳಿಗೆ, ವೇಗ ಮಿತಿ ಇಳಿಕೆಗೆ ಯಾವುದೇ ಸೂಚನಾ ಫಲಕಗಳಿಲ್ಲ. ವೇಗವಾಗಿ ವಾಹನ ಓಡಿಸಿ ಬಂದಾಗ ಅಪಘಾತಗಳಾಗ್ತಿವೆ ಎಂದು ಹೇಳಿದರು.
ಇದನ್ನೂ ಓದಿ: ಏಯ್ ಕುತ್ಕೊಳಯ್ಯ ಸ್ವಲ್ಪ : ಯತ್ನಾಳ್ ವಿರುದ್ದ ಡಿ.ಕೆ.ಶಿ ಗರಂ!
ಇನ್ನು ಮಾರ್ಚ್ ನಿಂದ ಜೂನ್ ವರೆಗೆ ಒಟ್ಟು 100 ಮೃತಪಟ್ಟಿದ್ದು, 335 ಜನ ಗಾಯಗೊಂಡಿದ್ದಾರೆ. ಸಂಚಾರ ವಿಭಾಗದ ಎಡಿಜಿಪಿಯವ್ರು ದಶಪಥ ಪರಿಶೀಲಿಸಿದ್ದಾರೆ. ದಶಪಥದಲ್ಲಿ ಹೈವೇ ಪ್ಯಾಟ್ರೋಲಿಂಗ್ ವಾಹನಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಂಡಿದ್ದಾರೆ. ಯಾವುದೇ ವಾಹನಗಳು ಮಾರ್ಗ ಮಧ್ಯೆ ನಿಲ್ಲದಂತೆ ಕ್ರಮ ವಹಿಸಲಾಗಿದೆ.
ದಶಪಥ ವ್ಯಾಪ್ತಿಯಲ್ಲಿ ಸ್ಥಳಗಳ ಸೂಚನಾ ಫಲಕಗಳನ್ನು ಹಾಕಲು ಕ್ರಮ ತೆಗೆದುಕೊಳ್ಳುತ್ತೇವೆ. ಲೈನ್ ಪಾಲನೆಗೆ ಕ್ರಮ, ಓವರ್ ಟೇಕ್ ಹೇಗೆ ಅನ್ನೋ ಬಗ್ಗೆ ಸೂಚನೆ ಕೊಡಲಾಗುತ್ತದೆ. ಲೈಸೆನ್ಸ್ ಸುಲಭವಾಗಿ ಸಿಗುತ್ತೆ, ಹಾಗಾಗಿ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಈ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗ್ತಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಉತ್ತರ ನೀಡಿದ್ದಾರೆ.