Monday, December 23, 2024

ಕಿಚ್ಚನ ವಿರುದ್ಧ ಷಡ್ಯಂತ್ರ.. ಫ್ಯಾನ್ಸ್ ರೊಚ್ಚಿಗೆದ್ರೆ ಕಥೆ ಏನು..?

ಬೆಂಗಳೂರು : ಒಂದ್ಕಡೆ ಸುದೀಪ್ ಮೇಲೆ ನಿರ್ಮಾಪಕರ ವಾಕ್ಸಮರ.. ಮತ್ತೊಂದ್ಕಡೆ ಕಿಚ್ಚನ ಕಾನೂನು ಸಮರ. ಎಂಟು ಹತ್ತು ದಿನಗಳಿಂದ ನಡೀತಿರೋ ಈ ವಾರ್​ಗೆ ಇದೀಗ ಕಿಚ್ಚನ ಫ್ಯಾನ್ಸ್ ಎಂಟ್ರಿ ಕೊಟ್ಟಿದ್ದಾರೆ. ನೆಚ್ಚಿನ ನಾಯಕನಟನ ಮೇಲೆ ಅಪಪ್ರಚಾರ ಮಾಡ್ತಿರೋ ಚಿತ್ರರಂಗದ ಒಂದಷ್ಟು ಮಂದಿ ವಿರುದ್ಧ ತಿರುಗಿ ಬಿದ್ದಿದ್ದಾರೆ ಸುದೀಪಿಯನ್ಸ್. ಇಷ್ಟಕ್ಕೂ ಕಿಚ್ಚನ ವಿರುದ್ಧ ಷಡ್ಯಂತ್ರ ಮಡ್ತಿರೋದ್ಯಾರು? ಫ್ಯಾನ್ಸ್ ರೊಚ್ಚಿಗೆದ್ರೆ ಏನೆಲ್ಲಾ ಆಗಬಹುದು ಗೊತ್ತಾ?

ಇದನ್ನೂ ಓದಿ: ಚುನಾವಣೆಯಲ್ಲಿ ವಾಮಮಾರ್ಗ ಹಿಡಿದ ಕಾಂಗ್ರೆಸ್ ಗೆದ್ದಿತು: ಛಲವಾದಿ ನಾರಾಯಣಸ್ವಾಮಿ

ಗೆದ್ದೇ ಗೆಲ್ಲುವೆ ಒಂದು ದಿನ.. ಗೆಲ್ಲಲೇಬೇಕು ಒಳ್ಳೆಯತನ ಅನ್ನೋ ಮಾತೊಂದಿದೆ. ಅದ್ರಂತೆ 27 ವರ್ಷಗಳ ಹಿಂದೆ ಐರನ್ ಲೆಗ್ ಅನಿಸಿಕೊಂಡ ಒಬ್ಬ ಸಾಮಾನ್ಯ ತರುಣ, ಇಂದು ಇಂಡಿಯನ್ ಸಿನಿದುನಿಯಾದ ಸೂಪರ್ ಸ್ಟಾರ್ ಆಗಿ ನಿಂತಿದ್ದಾರೆ. ಅರ್ಥಾತ್ ಗೆದ್ದು ತೋರಿಸಿದ್ದಾರೆ. ಆದ್ರೆ ಅವ್ರ ಒಳ್ಳೆಯತನವನ್ನ ಒಂದಷ್ಟು ಮಂದಿ ಅಕ್ಷರಶಃ ಮಿಸ್ ಯ್ಯೂಸ್ ಮಾಡಿಕೊಳ್ತಿದ್ದಾರೆ. ಅದಕ್ಕೆ ಸ್ವತಃ ಅವ್ರೇ ಇತ್ತೀಚೆಗೆ ನನ್ನ ಒಳ್ಳೆಯತನವನ್ನ ದುರುಪಯೋಗ ಮಾಡಿಕೊಳ್ಳಬೇಡಿ ಅಂತ ಟ್ವೀಟ್ ಕೂಡ ಮಾಡಿದ್ರು.

ಯೆಸ್.. ಕಿಚ್ಚ ಸುದೀಪ್ ಕನ್ನಡದ ರನ್ಯ, ಮಾಣಿಕ್ಯ ಹೌದು. ಆದ್ರೆ ಆಲ್ ಇಂಡಿಯಾ ಕಟೌಟ್ ಕೂಡ ಹೌದು. ಕನ್ನಡವನ್ನ ನ್ಯಾಷನಲ್ ಲೆವೆಲ್​​ನಲ್ಲಿ ಪ್ರೆಸೆಂಟ್ ಮಾಡಿದ ಹೆಮ್ಮೆಯ ಕನ್ನಡಿಗ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಈಗ ಚಾಲ್ತಿಯಲ್ಲಿದೆ. ಆದ್ರೆ ಕಿಚ್ಚ ದಶಕಗಳ ಹಿಂದೆಯೇ ಪ್ಯಾನ್ ಇಂಡಿಯನ್ ಸೂಪರ್ ಸ್ಟಾರ್ ಆಗಿ ಮಿಂಚು ಹರಿಸಿದ್ರು. ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ, ಗಾಯಕ ಹೀಗೆ ಚಿತ್ರರಂಗದ ಎಲ್ಲಾ ಆಯಾಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವ್ರು.

ಸತತ 27 ವರ್ಷಗಳಿಂದ ನಮ್ಮ ಕನ್ನಡಿಗರಿಗಷ್ಟೇ ಅಲ್ಲದೆ, ಮನೋಜ್ಞ ಅಭಿನಯದಿಂದ ಪರಭಾಷಾ ಸೂಪರ್ ಸ್ಟಾರ್​ಗಳ ಅಚ್ಚುಮೆಚ್ಚಿನ ನಟನಾಗಿ, ಅಲ್ಲಿನ ಪ್ರೇಕ್ಷಕರಿಗೂ ರುಚಿಸಿದ ಅಭಿನಯ ಚಕ್ರವರ್ತಿ ಇಂಡಿಯಾದ ಬೆಸ್ಟ್ ಌಕ್ಟರ್​ಗಳಲ್ಲಿ ಒಬ್ಬರು. ಸಿನಿಮಾ ಜರ್ನಿಯಲ್ಲಿ 30 ವರ್ಷಗಳ ಗಡಿಯಲ್ಲಿರೋ ಇವ್ರು 50 ಸಿನಿಮಾಗಳ ಗಡಿ ಕೂಡ ಮುಟ್ಟುತ್ತಿದ್ದಾರೆ. ಹಗಲಿರುಳು ಸಿನಿಮಾನೇ ಜೀವಿಸೋ ಇವ್ರು, ತಮ್ಮದೇ ಚಾರಿಟಬಲ್ ಸೊಸೈಟಿಯಿಂದ ಸಹಸ್ರಾರು ಸಾಮಾಜಿಕ ಕಾರ್ಯಗಳನ್ನೂ ಮಾಡ್ತಾ ಬರ್ತಿದ್ದಾರೆ. ಇಂತಹ ಕಿಚ್ಚನ ಮೇಲೆ ಒಂದಷ್ಟು ಮಂದಿ ಷಡ್ಯಂತ್ರ ರೂಪಿಸಿ, ಅವ್ರ ಹೆಸರಿಗೆ ಕಳಂಕ ತರೋಕೆ ನೋಡ್ತಿದ್ದಾರೆ.

ಅದ್ರ ಮೊದಲನೆಯ ಸ್ಟೆಪ್ ನಿರ್ಮಾಪಕ ಎಂ.ಎನ್ ಕುಮಾರ್ ಫಿಲ್ಮ್ ಚೇಂಬರ್​ನಲ್ಲಿ ಮಾಡಿದ ಆರೋಪ. ಹಣ ಪಡೆದು ಕಾಲ್​ಶೀಟ್ ಕೊಡದೆ ವಂಚಿಸಿದ್ದಾರೆ ಸುದೀಪ್ ಎಂದಿದ್ರು. ಅದಕ್ಕೆ ನಿರ್ಮಾಪಕ ಎನ್.ಎಂ ಸುರೇಶ್, ಸೂರಪ್ಪ ಬಾಬು, ಎ ಗಣೇಶ್, ಪ್ರವೀಣ್, ರೆಹಮಾನ್ ಸೇರಿದಂತೆ ಸಾಕಷ್ಟು ಮಂದಿ ಸಾಥ್ ಕೂಡ ನೀಡಿದ್ದಾರೆ. ಫಿಲ್ಮ್ ಚೇಂಬರ್, ನಿರ್ಮಾಪಕರ ಸಂಘ ಸೇರಿದಂತೆ ಸಾಕಷ್ಟು ಸಂಘ ಸಂಸ್ಥೆಗಳು ಕೂಡ ಆಧಾರ ರಹಿತ ತೇಜೋವಧೆಗೆ ಕೈ ಜೋಡಿಸಿವೆ.

ಇದನ್ನೂ ಓದಿ: ಏಯ್​ ಕುತ್ಕೊಳಯ್ಯ ಸ್ವಲ್ಪ : ಯತ್ನಾಳ್​ ವಿರುದ್ದ ಡಿ.ಕೆ.ಶಿ ಗರಂ!

ಈ ಹೈಡ್ರಾಮ ನೋಡಿ ನೋಡಿ ರೋಸಿ ಹೋದಂತಹ ಕಿಚ್ಚ, ಏಕ್ದಮ್ ಎಂ.ಎನ್ ಕುಮಾರ್ ಹಾಗೂ ಎನ್.ಎಂ ಸುರೇಶ್ ಅವ್ರಿಗೆ 10 ಕೋಟಿ ಮಾನನಷ್ಟ ಮೊಕದ್ದಮೆಯ ಲಾಯರ್ ನೋಟಿಸ್ ಕಳುಹಿಸಿದ್ದಾರೆ. ಸದ್ಯದಲ್ಲೇ ಕೋರ್ಟ್​ ನಿಂದಲೂ ನೋಟಿಸ್ ಕೊಡಲಿದ್ದಾರಂತೆ. ಆದಾಗ್ಯೂ ಸಹ, ನಿರ್ಮಾಪಕರು ಉದ್ದೇಶಪೂರ್ವಕವಾಗಿ 27 ವರ್ಷಗಳಿಂದ ಕಾಪಾಡಿಕೊಂಡು ಬಂದಂತಹ ಘನತೆ, ಗೌರವವನ್ನ ಹಾಳು ಮಾಡಲು ಮುಂದಾಗಿರೋದು ಕಂಡು, ಸ್ವತಃ ಸುದೀಪ್ ಅವ್ರೇ ಫಿಲ್ಮ್ ಚೇಂಬರ್ ಹಾಗೂ ನಿರ್ಮಾಪಕರ ಸಂಘಗಳಿಗೆ ಐದು ಪುಟಗಳ ಸುಧೀರ್ಘ ಪತ್ರ ಬರೆದಿದ್ದಾರೆ.

ಅದರಲ್ಲಿ ಆಧಾರವಿಲ್ಲದೆ ಆರೋಪ ಮಾಡ್ತಿರೋ ನಿರ್ಮಾಪಕರಿಗೆ ಘನತೆವೆತ್ತ ಸಂಸ್ಥೆಗಳು ಹೇಗೆ ಸಪೋರ್ಟ್​ ಮಾಡ್ತಿವೆ ಅಂತಲೂ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ವಿಷಯ ಕೋರ್ಟ್​ ಮೆಟ್ಟಿಲೇರಿದ್ದು, ಕಾನೂನಿನ ಮೂಲಕ ಬಗೆಹರಿಸಿಕೊಳ್ತೀನಿ. ತಪ್ಪಿದ್ದರೆ ದಂಡ ಕಟ್ಟಿಕೊಡ್ತೀನಿ ಅಂತ ಖಡಕ್ ಆಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇವೆಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ವಾರ್​ಗೆ ಇದೀಗ ಕಿಚ್ಚನ ಅಭಿಮಾನಿಗಳು ಎಂಟ್ರಿ ಕೊಟ್ಟಿದ್ದಾರೆ.

ರಾಜ್ಯದ ವಿವಿಧಡೆ, ತಮ್ಮ ನೆಚ್ಚಿನ ನಾಯಕನಟನ ಹೆಸರಿಗೆ ಮಸಿ ಬಳಿಯಲು ಮುಂದಾಗಿರೋ ಒಂದಷ್ಟು ನಿರ್ಮಾಪಕರ ವಿರುದ್ಧ ರೋಡಿಗಿಳಿದು ಪ್ರತಿಭಟನೆ ಮಾಡ್ತಿದ್ದಾರೆ. ಚಾಮರಾಜನಗರ, ಬೆಂಗಳೂರು ಸೇರಿದಂತೆ ಕಿಚ್ಚನ ಡೈಹಾರ್ಡ್​ ಫ್ಯಾನ್ಸ್, ನಿರ್ಮಾಪಕರ ಫ್ಲೆಕ್ಸ್​ಗೆ ಚಪ್ಪಲಿ ಸೇವೆ ಮಾಡಿ, ಧಿಕ್ಕಾರ ಕೂಗಿದ್ದಾರೆ. ಆಧಾರವಿಲ್ಲದೆ ಆರೋಪ ಮಾಡಿರೋ ನಿರ್ಮಾಪಕರು ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಅವ್ರ ಮನೆಗಳ ಮುಂದೆ ಹೋರಾಟ ಮಾಡೋದು ಗ್ಯಾರೆಂಟಿ ಎಂದಿದ್ದಾರೆ.

ಫಿಲ್ಮ್ ಚೇಂಬರ್ ಹೀಗೆ ನಿರ್ಮಾಪಕರು ಮಾಡೋ ಸುಳ್ಳು ಆರೋಪಗಳಿಗೆ ಆಸ್ಪಾದ ನೀಡಬಾರದು ಅಂತ ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿ ಚೇಂಬರ್​ಗೆ ಪತ್ರ ಬರೆದಿದೆ. ಅಂದಹಾಗೆ ನಿರ್ಮಾಪಕ ರೆಹಮಾನ್ ಬಳಿ ಜಸ್ಟ್ ಒಂದು ಲಕ್ಷ ಸಂಭಾವನೆ ಪಡೆದಿದ್ದ ಕಿಚ್ಚನಿಂದ ಆ ಒಂದು ಲಕ್ಷ ಕೂಡ ವಾಪಸ್ ಪಡೆದಿದ್ದರಂತೆ ರೆಹಮಾನ್. ಬಳಿಕ ನಿರ್ಮಾಪಕರ ಮಗಳ ಅನಾರೋಗ್ಯದ ವೇಳೆ 10 ಲಕ್ಷ ಆರ್ಥಿಕ ಸಹಾಯ ಕೂಡ ಮಾಡಿದ್ರು ಇದೇ ಕಿಚ್ಚ. ಅದನ್ನೆಲ್ಲಾ ಮರೆತು, ಈಗ ಹೀಗೆ ಆರೋಪ ಮಾಡೋದು ಮಾನವೀಯತೆಯೇ..?

ಒಂದು ವೇಳೆ ಸುದೀಪ್ ಫ್ಯಾನ್ಸ್ ರೊಚ್ಚಿಗೆದ್ದರೆ ಏನೆಲ್ಲಾ ಆಗಬಹುದು ಅನ್ನೋದ್ರ ಅರಿವು ಆರೋಪ ಮಾಡ್ತಿರೋರಿಗಿದೆಯೇ..? ಸಮುದ್ರದ ಅಲೆಗಳ ವಿರುದ್ಧ ಈಜಲು ಮುಂದಾಗಿರೋರಿಗೆ ಗೆಲುವು ಸಿಗುತ್ತೆ ಅನ್ನೋದು ಮರೀಚಿಕೆ. 27 ವರ್ಷದಿಂದ ಕಟ್ಟಿದ ಕಿಚ್ಚನ ಸಾಮ್ರಾಜ್ಯವನ್ನ ಯರೋ ಬಂದು ಕೆಡವಲು ಸಾಧ್ಯವೇ..? ಇದು ಏನೆಲ್ಲಾ ವಿಕೋಪಕ್ಕೆ ತಿರುಗಲಿದೆ..? ಮಾಡದ ತಪ್ಪಿಗೆ ನಿಂದನೆಗಳನ್ನ ಮೇಲೆ ಹಾಕಿಕೊಂಡಿರೋ ಕಿಚ್ಚನ ಸೈಲೆನ್ಸ್ ಹಿಂದಿನ ಅಸಲಿ ಪ್ಲ್ಯಾನ್ ಏನು ಅನ್ನೋದನ್ನ ಇನ್ನಷ್ಟೇ ಕಾದು ನೋಡಬೇಕಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ.

RELATED ARTICLES

Related Articles

TRENDING ARTICLES