Sunday, December 22, 2024

ಯತ್ನಾಳ್​ಗೆ ರಾಜಕೀಯ ಬೆರೆಸಿ ಮಾತಾಡೋದ್ ಬಿಟ್ಟು ಬೇರೆ ಬರೋದಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಯತ್ನಾಳ್​ಗೆ ರಾಜಕೀಯ ಬೆರೆಸಿ ಮಾತಾಡೋದ್ ಬಿಟ್ಟು ಬೇರೆ ಬರೋದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರುಗೇಟು ಕೊಟ್ಟಿದ್ದಾರೆ.

ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಜೈನಮುನಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರ ತನ್ನ ನಿಲುವು ಸ್ಪಷ್ಟ ಪಡಿಸಬೇಕು ಹಾಗೂ ಅಗತ್ಯ ಬಿದ್ದಲ್ಲಿ ಇದನ್ನು ಸಿಬಿಐಗೆ ವಹಿಸಬೇಕು ಎಂಬ ಹೇಳಿಕೆಗೆ ಉತ್ತರಿಸಿದ ಅವರು ನಾವು ಇಂದು ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಈ ಕೃತ್ಯವನ್ನು ನಮ್ಮ ಪಕ್ಷ ಕೂಡ ಖಂಡಿಸುತ್ತೆ ಈ ರೀತಿ ನಡೆಯಬಾರದು ಎಂದರು.

ಇದನ್ನೂ ಓದಿ: ಕನ್ನಡ ಭಾಷೆ ಬಳಸದ ಹಿನ್ನಲೆ ಕರುನಾಡ ವಿಜಯ ಸೇನೆ ಕಾರ್ಯಕರ್ತರ ಪ್ರತಿಭಟನೆ

ಹತ್ಯೆ ಘಟನೆ ವಿರೋಧಿಸಿ ಜೈನ ಮುನಿಗಳು ನಡೆಸುತ್ತಿದ್ದ ಅಮರಣಾಂತ ಉಪವಾಸ ಕೈಬಿಟ್ಟಿದ್ದಾರೆ. ಗೃಹ ಸಚಿವರ ಮನವಿಯ ಮೇರೆಗೆ ಉಪವಾಸ ಕೈಬಿಟ್ಟಿದ್ದಾರೆ. ಆದರೆ ಸದನದಲ್ಲಿ ರಾಜಕೀಯ ಬೆರೆಸಿ ಕೆಲವರು ಮಾತನಾಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಗೆ ರಾಜಕೀಯ ಬೆರಸದೆ ಮಾತನಾಡಲು ಬರುವುದಿಲ್ಲ ಎಂದು ಹೇಳಿದರು.

ಜೈನ ಮುನಿಗಳ ಹತ್ಯೆ ಇದು ಕ್ರೂರ ಘಟನೆ. ಇದು ಎಲ್ಲೂ ನಡೆಯಬಾರದು. ಇದು ಖಂಡನೀಯ. ಮಂಗಳವಾರ ಗೃಹ ಸಚಿವರು ಉತ್ತರ ಕೊಡುತ್ತಾರೆ‌. ಅಗತ್ಯ ಬಿದ್ದರೆ ನಾನು ಉತ್ತರ ಕೊಡುತ್ತೇನೆ ಸಿದ್ದರಾಮಯ್ಯ ಅವರು ಎಂದು‌ ತಿಳಿಸಿದರು.

 

 

 

 

RELATED ARTICLES

Related Articles

TRENDING ARTICLES