Sunday, December 22, 2024

ಶಾಲಾ ಮಕ್ಕಳ ಸಮವಸ್ತ್ರ : ಪೋಷಕರ ಜೆಬಿಗೆ ಬಿತ್ತು ಕತ್ತರಿ

ಬೆಂಗಳೂರು : 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಪೋಷಕರ ಗಮನಕ್ಕೆ, ಶಾಲಾ ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ.

ಇದನ್ನೂ ಓದಿ: ರಾಜ್ಯದಾದ್ಯಂತ ಗ್ರಾಮೀಣ ನ್ಯಾಯಾಲಯಗಳನ್ನು ಪ್ರಾರಂಭಿಸಲು ಸರ್ಕಾರ ಚಿಂತನೆ : ಸಚಿವ ಎಚ್‌ಕೆ ಪಾಟೀಲ್

ಸರ್ಕಾರದಿಂದ ನೀಡುವ ಶಾಲಾ ಸಮವಸ್ತ್ರಗಳ ಹೊಲಿಗೆ ವೆಚ್ಚವನ್ನು ಇನ್ನು ಮುಂದೆ ಮಕ್ಕಳ ಪೋಷಕರೆ  ಭರಿಸಬೇಕು. ಈಗಾಗಲೇ ಮಕ್ಕಳಿಗೆ ಒಂದು ಜೊತೆ ಸಿದ್ದಪಡಿಸಿದ ಸಮವಸ್ತ್ರ ವಿತರಿಸಿರುವ ಶಿಕ್ಷಣ ಇಲಾಖೆ ಎರಡನೇ ಜೊತೆ ಸಮವಸ್ತ್ರವನ್ನು ನೀಡಲು ಸಿದ್ದಮಾಡಿಕೊಂಡಿದ್ದು ಇದರ ಹೊಲಿಗೆ ವೆಚ್ಚವನ್ನು ಪೋಷಕರೇ ಭರಿಸುವಂತೆ ಸೂಚಿಸಿದೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯ ಒಟ್ಟು 45,45,749 ವಿದ್ಯಾರ್ಥಿಗಳಿದ್ದಾರೆ, ಈ ಮಕ್ಕಳಿಗೆ 2 ನೇ ಜೊತೆ ಸಮವಸ್ತ್ರದ ಬಟ್ಟೆಯನ್ನು ಮಾತ್ರ ನೀಡಲಿದೆ. ಹೊಲಿಕೆಯ ವೆಚ್ಚ ಅಂದಾಜು 600-700 ರೂ.ಗಳನ್ನು ಪೋಷಕರೇ ಭರಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಿದೆ.

RELATED ARTICLES

Related Articles

TRENDING ARTICLES