Wednesday, January 22, 2025

ಅಕ್ಕಿ ಕೊಡೋ ಶಕ್ತಿ ನಮ್ಮ ಸರ್ಕಾರಕ್ಕೆ ಇದೆ : ಡಿಕೆಶಿ ಗುಡುಗು

ಬೆಂಗಳೂರು : ಅಕ್ಕಿ ಕೊಡೋ ಶಕ್ತಿ ನಮ್ಮ ಸರ್ಕಾರಕ್ಕೆ ಇದೆ ಎಂದು ಬಿಜೆಪಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗುಡುಗಿದರು.

ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಹಣದ ನೇರ ವರ್ಗಾವಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಐದು ಗ್ಯಾರಂಟಿಗಳನ್ನು ಕೊಟ್ಟಿದ್ವಿ. ಐದು ಕಿಲೋನಿಂದ 10 ಕಿಲೋ ಅಕ್ಕಿ ಕೊಡ್ತೇವೆ ಎಂದಿದ್ವಿ. ಚರ್ಚೆ, ರಾಜಕೀಯ ಎರಡೂ ನಡೀತಾ ಇದೆ. ಕೇಂದ್ರ ಸರ್ಕಾರ ಹೃದಯ ವೈಶಾಲ್ಯತೆಯಿಂದ ಅಕ್ಕಿ‌ ಕೊಡಬಹದಿತ್ತು. ಅಕ್ಕಿ ಕೊಡೋ ಶಕ್ತಿ ನಮ್ಮ ಸರ್ಕಾರಕ್ಕೆ ಇದೆ ಎಂದು ಟಕ್ಕರ್ ಕೊಟ್ಟರು.

ತಪ್ಪುದಾರಿಗೆ ಎಳೆಯುತ್ತಿದ್ದಾರೆ

ಮೊದಲ ಬಾರಿ ಸಿಎಂ ಆದಾಗಲೇ ಬಸವ ಜಯಂತಿ ದಿನ ಸಿದ್ದರಾಮಯ್ಯನವರು ಇಡೀ ರಾಷ್ಟ್ರಕ್ಕೆ ಈ ಸಂದೇಶ ಕೊಟ್ಟಿದ್ರು. ಅಲ್ಲಿಂದ 7 ಕಿಲೋಗೆ ಹೋಯ್ತು, 5 ಕಿಲೋಗೆ ಬಂತು. ಬಿಜೆಪಿಯವರಿಗೆ ಒಂದು ಹೇಳಲು ಬಯಸುತ್ತೇನೆ. ಆಹಾರ ಕಾಯ್ದೆ ಯಾರು, ಯಾಕೆ ತಂದ್ರು? ಯುಪಿಎ ಸರ್ಕಾರ ಆಹಾರ ಭದ್ರತೆ ಕಾಯ್ದೆಯನ್ನ ಕೊಡ್ತು. ಐದು ಕಿಲೋ ಕೇಂದ್ರದಿಂದ ಬರ್ತಿದೆ ಅಂತ ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಅಕ್ಕಿ ಸಿಗದಿದ್ರೆ ಮುಂದಿನ ತಿಂಗಳೂ ದುಡ್ಡು ಕೊಡ್ತೀವಿ : ಸಿದ್ದರಾಮಯ್ಯ

ಉಚಿತ, ಖಿಚಿತ, ನಿಶ್ಚಿತ ಅಂತ ಹೇಳಿದ್ವಿ

ಮೂರು ಗ್ಯಾರಂಟಿ ಜಾರಿ ಬಂದುಬಿಟ್ಟಿದೆ. ಕೆಲವರ ಅಕೌಂಟ್​ಗೆ ದುಡ್ಡು ಕೂಡ ಹೋಗಾಯ್ತು. ಆಹಾರ ಸಚಿವರು ಬಹಳ ಶ್ರಮ ಪಟ್ಟಿದ್ದಾರೆ. ಅಸೆಂಬ್ಲಿ ನಡೀತಿರೋದ್ರಿಂದ ಇಲ್ಲೇ ಕಾರ್ಯಕ್ರಮ ಮಾಡೋಣ ಅಂತ ನಿರ್ಧಾರ ಮಾಡಿದ್ವಿ. ನಾವು ಮಾತು ಕೊಟ್ಟಂತೆ ಮಾಡಿದ್ದೇವೆ. ಯಾರು ಯಾರಿಗೆ ಉತ್ತರ ಕೊಡಬೇಕೋ ಅಸೆಂಬ್ಲಿಯಲ್ಲೇ ಕೊಡ್ತೀವಿ. ಉಚಿತ, ಖಿಚಿತ, ನಿಶ್ಚಿತ ಅಂತ ಹೇಳಿದ್ವಿ. ಇಡೀ ದೇಶಕ್ಕೆ ನಮ್ಮ ಯೋಜನೆ ಒಂದು ಮಾದರಿಯಾಗಿದೆ ಎಂದು ಹೇಳಿದರು.

ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಒಂದು ತಿಂಗಳಿಗೆ ಸರಾಸರಿ ಐದು ಸಾವಿರ ತಲುಪುವಂತೆ ನಮ್ಮ ಯೋಜನೆ ಇದೆ. ಆಹಾರ ಸಚಿವರ ನೇತೃತ್ವದಲ್ಲಿ ಒಳ್ಳೆಯ ಕೆಲಸ ಆಗಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

RELATED ARTICLES

Related Articles

TRENDING ARTICLES