ಬೆಂಗಳೂರು : ಜೈನ ಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐಗೆ ಯಾವ ಕಾರಣಕ್ಕೆ ಕೊಡಬೇಕು? ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ಪ್ರಶ್ನಿಸಿದರು.
ವಿಧಾನ ಪರಿಷತ್ ಕಲಾಪದಲ್ಲಿ ಮಾತನಾಡಿದ ಅವರು, ಒಂದು ಗಂಟೆಗೆಳ ಕಾಲ ಮುನಿಗಳ ಹತ್ಯೆ, ಹೆಯ್ಯ ಕೃತ್ಯ ಹಾಗೂ ನಾಗರಿಕ ಸಮಾಜ ತಲೆ ಬಾಗಿಸುವ ಘಟನೆ ಬಗ್ಗೆ ಚರ್ಚೆ ಆಗಿದೆ ಎಂದರು.
ನಮಗೆ ಏನಾದರೂ ರಾಜಕೀಯ ಇಚ್ಛಾಶಕ್ತಿ ಇದೆಯಾ? ಅಥಾವ ಪ್ರಕರಣದಲ್ಲಿ ನಮ್ಮ ಕಡೆಯ, ನಿಮ್ಮ ಕಡೆಯಾ ರಾಜಕೀಯ ವ್ಯಕ್ತಿಗಳು ಇದ್ದಾರಾ? ಯಾಕೆ ಈ ಪ್ರಕರಣ ಸಿಬಿಐಗೆ ಕೊಡಬೇಕು. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಆರೋಪಿಗಳಿಗೆ ಭಯ ಬರುವಂತೆ ನಿರ್ಣಯ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ : ಮಾನಸಿಕ ಖಿನ್ನತೆಯಿಂದ ಮನನೊಂದು ನದಿಗೆ ಹಾರಿ ಸ್ವಾಮೀಜಿ ಆತ್ಮಹತ್ಯೆ
ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಪ್ರಕರಣದಲ್ಲಿ ಯಾರು ಸಹ ರಕ್ಷಣೆ ಪಡೆಯಲು ಸಾಧ್ಯವಿಲ್ಲ. ಯಾರೆ ಇದ್ದರೂ, ಯಾರದ್ದೆ ಕೈ ವಾಡ ಇದ್ದರು ಬಯಲಿಗೆ ಎಳೆಯುತ್ತೇವೆ. ಪ್ರಾಮಾಣಿಕವಾಗಿ, ದಿಟ್ಟತನವಾಗಿ ಮಾಡ್ತೇವೆ. ನಿಮ್ಮ ಸಹಕಾರ ಸಹ ಬೇಕು. ಇದರಲ್ಲಿ ಯಾವುದೇ ರಾಜಕೀಯ ಬೇಡ ಎಂದು ಭರವಸೆ ನೀಡಿದರು.
6 ಲಕ್ಷ ರೂಪಾಯಿಗೆ ಕೊಲೆ
ಪ್ರಕರಣವನ್ನು ರಾಜಕೀಯ ತೆಗೆದಿಟ್ಟು, ನಮ್ಮ ಜವಬ್ದಾರಿ ಹಾಗೂ ಏನಾಗಿದೆ ಎಂದು ಅರ್ಥೈಸಿಕೊಂಡು ಹೆಜ್ಜೆ ಇಡುವ ಸಂದರ್ಭವಿದೆ. ಭಾವೋದ್ವೇಗಕ್ಕೆ ಒಳಗಾಗಿ ಅಥಾವ ತಪ್ಪು ಮಾಹಿತಿಯಿಂದ ಮಾತಾಡೋದು ಬೇಡ. ಬಂಧಿತ ಆರೋಪಿ ಹೇಳಿರುವ ಹೇಳಿಕೆಯನ್ನು ಪೊಲೀಸರು ಹೇಳಿದ್ದಾರೆ. 6 ಲಕ್ಷ ರೂಪಾಯಿಗೆ ಕೊಲೆ ಮಾಡಿದ್ದೇನೆ ಎಂದು ಆರೋಪಿ ಹೇಳಿದ್ದಾನೆ. ಅದನ್ನೇ ಪೊಲೀಸರು, ಗೃಹ ಸಚಿವರು ಹೇಳಿದ್ದಾರೆ ಎಂದರು ಮಾಹಿತಿ ನೀಡಿದರು.
ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ಭೇಟಿ ಕೊಟ್ಟಿದ್ದಾರೆ. ಸಂಪೂರ್ಣ ಮಾಹಿತಿ ಪಡೆಯುತ್ತಾರೆ. ನಾಳೆ ಗೃಹ ಮಂತ್ರಿಗಳು ಉತ್ತರ ಕೊಡ್ತಾರೆ. ಯಾರು ಸಹ ಆತಂಕಕ್ಕೆ ಒಳಗಾಗಬೇಡಿ. ಇದು ಕ್ರೋದದ ವಿಚಾರ ಅಲ್ಲ. ಕೊಲೆ ಮಾಡಿದ ವ್ಯಕ್ತಿ ಮಾನಸಿಕ ಸ್ಥಿತಿಯಲ್ಲೂ ಗೌರವಿಸಬೇಕಿಲ್ಲ ಎಂದು ಹೇಳಿದರು.