ಉಡುಪಿ : ನಮ್ಮ ಗುರುಗಳು, ಮುನಿಗಳು ಯಾರ ವಿಚಾರಕ್ಕೆ ಹೋಗದವರು. ಅನ್ಯಾಯ, ಮೋಸ, ಕಳ್ಳತನ ಮಾಡಿಲ್ಲ ಎಂದು ಕಾರ್ಕಳ ಜೈನಮಠದ ರಾಜಗುರು ಧ್ಯಾನ ಯೋಗಿ ಸ್ವಸ್ತಿಶ್ರೀ ಲಲಿತ ಕೀರ್ತಿ ಪಟ್ಟಾಚಾರ್ಯವರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಉಡುಪಿಯಲ್ಲಿ ಪವರ್ ಟಿವಿಯೊಂದಿಗೆ ಮಾತನಾಡಿದ ಶ್ರೀಗಳು, ಬೆಳಗಾವಿಯ ಚಿಕ್ಕೋಡಿಯ ಜೈನ ಮುನಿ ಹೀರೆಕುಡಿಯ ಆಚಾರ್ಯ ಶ್ರೀ 108 ಕಾಮ ಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಪ್ರಕರಣವನ್ನು ಖಂಡಿಸಿದರು.
ಜೈನ ಧರ್ಮ ಪ್ರಾಂತ ತಪಸ್ವಿ ಇರುವವರೆಗೆ ಭಾರತದಲ್ಲಿ ಧರ್ಮ ಇರಲು ಸಾಧ್ಯ. ಮಹಾಮಾಹ ಪುರುಷರಿಗೆ ಜನ್ಮ ಕೊಟ್ಟಂತಹ ದೇಶ ಇದ್ರೆ ಅದು ಭಾರತ ದೇಶ. ಇಂತಹ ದೇಶದಲ್ಲಿ ಸಾಧುಗಳ ಕೊಲೆ ಮಾಡಿದ ಆರೋಪಿಗಳಿಗೆ ತಕ್ಕ ಶಿಕ್ಷೆ ಯಾಗಬೇಕು ಎಂದು ದುಃಖ ಭರಿತ ಮಾತುಗಳನ್ನಾಡಿದರು.
ಇದನ್ನೂ ಓದಿ : ಜೈನ ಮುನಿ ಹತ್ಯೆ : ಇಂಥ ಕೃತ್ಯ ಎಂದೂ, ಎಲ್ಲೂ ನಡೆಯಬಾರದು : ಪೇಜಾವರ ಶ್ರೀ
ದೇಶವೇ ಕತ್ತಲೆಯಾಗುತ್ತೆ
ಮುನಿಗಳ ಹಾಗೂ ಗುರುಗಳ ಸಂಖ್ಯೆ ಕಡಿಮಯಾದಾಗ ದೇಶವೇ ಕತ್ತಲೆಯಾಗುತ್ತೆ. ಇದೇ ರೀತಿ ಹತ್ಯೆಗಳಾಗುತ್ತಾ ಹೊದಲ್ಲಿ ಮುಂದೆ ಒಂದು ದಿನ ಮೊಡ ಮುಸುಕಿದ ಹಾಗೆ ಕತ್ತಲು ಅವರಿಸಲಿದೆ. 21 ಸಾವಿರಗಳ ಕಾಲ ಪಂಚಮಕಾಲಗಳಿರುತ್ತೆ. ಅದರಲ್ಲಿ ಈಗಾಗಲೇ 2 ಸಾವಿರ ವರ್ಷ ಕಳೆದಿದೆ. ಭಾರತದ ಪರಂಪರೆಯಲ್ಲಿ ಇನ್ನು ಬದುಕಿವುದು ಹೇಗೆ? ಎಂದು ಅಸಮಾಧಾನ ಹೊರಹಾಕಿದರು.
ಘನಘೋರ ಅನಾಹುತ
ನಮ್ಮ ಗುರುಗಳು, ಮುನಿಗಳು ಯಾರ ವಿಚಾರಕ್ಕೆ ಹೋಗದವರು ಅನ್ಯಾಯ ಮೋಸ ಕಳ್ಳತನ ಮಾಡಿಲ್ಲ. ನಮ್ಮ ಮುನಿಗಳನ್ನು ಕೊಚ್ಚಿ ತುಂಡುತುಂಡಗಳಾಗಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡುವ ಮೂಲಕ ಇಂತಹ ಘನಘೋರ ಅನಾಹುತ ನಡೆದಿದೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಶೇಷ ಆಸಕ್ತಿ ವಹಿಸಿ, ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳಬೇಕು. ಆ ಮೂಲಕ ಮುಂದೆ ಇಂಥ ಅನಾಹುತ ಆಗದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಒತ್ತಾಯಿಸಿದರು.