Wednesday, January 22, 2025

ಅಕ್ಕಿ ಸಿಗದಿದ್ರೆ ಮುಂದಿನ ತಿಂಗಳೂ ದುಡ್ಡು ಕೊಡ್ತೀವಿ : ಸಿದ್ದರಾಮಯ್ಯ

ಬೆಂಗಳೂರು : ಅಕ್ಕಿ ಸಿಗದಿದ್ರೆ ಮುಂದಿನ ತಿಂಗಳೂ ಫಲಾನುಭವಿಗಳಿಗೆ ಹಣ ಕೊಡ್ತೀವಿ. ಇದಕ್ಕೆ ಹತ್ತು ಸಾವಿರ ಕೋಟಿ ಇಟ್ಟಿದ್ದೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅನ್ನಭಾಗ್ಯ ಯೋಜನೆಯಡಿ ಇಂದಿನಿಂದ ಫಲಾನುಭವಿಗಳ ಖಾತೆಗೆ ಹಣದ ನೇರ ವರ್ಗಾವಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಕ್ಕಿ‌ ಕೊಡಬೇಕು ಅಂತಾನೆ ನಾವು ನಿರ್ಧಾರ ಮಾಡಿದ್ವಿ. ಈಗ ಎಷ್ಟು ಜ‌ನ ಇದ್ದಾರೋ ಅಷ್ಟು ಜನಕ್ಕೆ ತಲಾ 170 ರೂಪಾಯಿ ಕೊಡಲು ತೀರ್ಮಾನ ಮಾಡಿದ್ವಿ. ಓಪನ್ ಮಾರ್ಕೆಟ್ ನಿಂದ ಖರೀದಿಸಲು ಟೆಂಡರ್ ಮಾಡಿದ್ದೀವಿ. ಇವತ್ತಿನಿಂದ ಫಲಾನುಭವಿಗಳ ಅಕೌಂಟ್​ಗೆ ಹಣ ಹೋಗಿದೆ. ಈ ತಿಂಗಳೊಳಗೆ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೆ ಹಣ ಕೊಡ್ತೀವಿ ಎಂದು ಹೇಳಿದರು.

ಇದನ್ನೂ ಓದಿ : ಸರಿ.. ದುಡ್ಡು ಕೊಟ್ರೂ ಎಷ್ಟು ಕೊಡ್ತಿದೀರಿ? : ಬೊಮ್ಮಾಯಿ ಗುಡುಗು

ಇದು ಡರ್ಟಿ ಪಾಲಿಟಿಕ್ಸ್, ದ್ವೇಷದ ರಾಜಕೀಯ

ನಾವು ಅಕ್ಕಿಗಾಗಿ ಪತ್ರ ಬರೆದಿದ್ದೆವು. ಆಗ ಕೊಡ್ತೀವಿ ಅಂದಿದ್ರು. ಎಫ್​ಸಿಐನವ್ರು ಅಕ್ಕಿ ಕೊಡ್ತಾರೆ ಅಂತ ಸುಮ್ಮನೆ ಇದ್ವಿ. ಆಮೇಲೆ ಅಕ್ಕಿ‌ ಕೊಡೋಕ್ಕಾಗಲ್ಲ ಅಂತ ಪತ್ರ ಬರೆದ್ರು. ಇದು ಡರ್ಟಿ ಪಾಲಿಟಿಕ್ಸ್, ದ್ವೇಷದ ರಾಜಕೀಯ. ಏನಂಥ ಕರೆಯಬೇಕು ಇದನ್ನು. ಈಗ ಇ ಆಕ್ಷನ್ ಕರೆದಿದ್ದಾರೆ, ಯಾರೂ ತೆಗೆದುಕೊಳ್ಳೋಕೆ ರೆಡಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ನಮಗೆ ಇಕ್ಕಟ್ಟಿನ ಪರಿಸ್ಥಿತಿ ಬಂದಿತ್ತು

36.60 ರೂ.ಗೆ ನಮಗೆ ಅಕ್ಕಿ ಕೊಡಬೇಕಿತ್ತು. ಪುಕ್ಕಟೆ ಅಲ್ಲ, ಹಣ ಕೊಡ್ತೀವಿ ಅಂದ್ರೂ ಕೊಡಲಿಲ್ಲ. ರಾಜಕೀಯ ಮಾಡಿದ್ರು. ಈ ರೀತಿ ಬಡವರಿಗೆ ದ್ರೋಹ ಮಾಡೋ ಕೆಲಸ ಮಾಡಿದ್ರು. ಛತ್ತೀಸ್ ಘಡ್, ಪಂಜಾಬ್, ತೆಲಂಗಾಣ, ಆಂಧ್ರ ಎಲ್ಲಾ ಸಿಎಂಗಳ ಜೊತೆ ನಾನೇ ಮಾತಾಡಿದೆ. 2 ಲಕ್ಷ ಮೆಟ್ರಿಕ್ ಟನ್ ಕೊಡ್ತೀವಿ ಅಂತ ಯಾರೂ ಹೇಳಿಲ್ಲ. ನಮಗೆ ಇಕ್ಕಟ್ಟಿನ ಪರಿಸ್ಥಿತಿ ಬಂದಿತ್ತು. ಮಾತು ಕೊಟ್ಟಿದ್ವಿ, ಹೀಗಾಗಿ ದುಡ್ಡು ಕೊಡ್ತಿದ್ದೀವಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES