Sunday, December 22, 2024

ಚಾಮುಂಡೇಶ್ವರಿ ವರ್ಧಂತಿ‌ ಮಹೋತ್ಸವ ಸಂಭ್ರಮ: ಹರಿದು ಬಂದ ಭಕ್ತಸಾಗರ

ಮೈಸೂರು: ಚಾಮುಂಡಿ ಬೆಟ್ಟದಲ್ಲಿಂದು ಶ್ರೀ ಚಾಮುಂಡೇಶ್ವರಿ ವರ್ಧಂತಿ‌ ಮಹೋತ್ಸವ ಸಂಭ್ರಮ, ಸಡಗರದಿಂದ ನಡೆಯುತ್ತಿದೆ.

ಇದನ್ನು ಓದಿ: ಗಗನಕ್ಕೇರಿದ ಟೊಮ್ಯಾಟೋ ಬೆಲೆ: ಟೊಮ್ಯಾಟೊ ತುಂಬಿದ ವಾಹನ ಕದ್ದೊಯ್ದ ಕಳ್ಳರು

ದೇವಾಲಯದಲ್ಲಿ ವರ್ಧಂತಿ ಮಹೋತ್ಸವದ ಹಿನ್ನೆಲೆ  ಬೆಳಗ್ಗೆ 9.30ಕ್ಕೆ ಮಹಾ ಮಂಗಳಾರತಿ ರುದ್ರಾಭಿಷೇಕ, ಕುಂಕುಮ ಅಭಿಷೇಕ, ಸಹಸ್ರ ನಾಮಾರ್ಚನೆ, ಅಭ್ಯಂಜನ ಸ್ಥಾನ ಮಾಡಿ ಮಂಗಳಾರತಿ ನಡೆಯುತ್ತಿದೆ.

ಚಿನ್ನದ ಪಲ್ಲಕ್ಕಿ ಉತ್ಸವ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು ಬೆಳಗ್ಗೆ 10.30ಕ್ಕೆ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಿಂದ ಚಾಲನೆ ದೊರೆಯಲಿದೆ.

ಚಾಮುಂಡೇಶ್ವರಿ ವರ್ಧಂತಿಯ ಹಿನ್ನೆಲೆ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆ ಇದ್ದು ಬೆಟ್ಟದ ರಸ್ತೆಯಲ್ಲಿ ಜಿಲ್ಲಾಡಳಿತದಿಂದ 50 KSRTC ಬಸ್‌ಗಳ ವ್ಯವಸ್ಥೆಮಾಡಲಾಗಿದೆ ಮತ್ತು ಖಾಸಗಿ ವಾಹನಗಳಿಗೆ ನಿಷೇಧ ವಿಧಿಸಲಾಗಿದೆ.

1829ರಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು ಆಷಾಢ ಮಾಸದ ಕೃಷ್ಣಪಕ್ಷ, ರೇವತಿ ನಕ್ಷತ್ರದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿಸಿದ್ದರು ಅದೇ ಶುಭಗಳಿಗೆಯನ್ನು ಅಮ್ಮನವರ ವರ್ಧಂತಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

RELATED ARTICLES

Related Articles

TRENDING ARTICLES