Monday, December 23, 2024

ಸರಿ.. ದುಡ್ಡು ಕೊಟ್ರೂ ಎಷ್ಟು ಕೊಡ್ತಿದೀರಿ? : ಬೊಮ್ಮಾಯಿ ಗುಡುಗು

ಬೆಂಗಳೂರು : ನಿಮಗೆ ಅಕ್ಕಿ ಕೊಡೋ ಇಚ್ಛಾಶಕ್ತಿ ಇಲ್ಲ. ಈಗ ದುಡ್ಡು ಕೊಡಲು ಮುಂದಾಗಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಜನ ದುಡ್ಡು ತಿಂತಾರಾ ಅಂತ ಸಿಎಂ ಕೇಳಿದ್ರು. ಈಗ ನಾವು ಬಿಜೆಪಿಯವ್ರು ದುಡ್ಡು ಕೊಡಿ ಅಂದಿದಾರೆ ಅಂತ ಹೇಳ್ತಿದೀರಿ. ಸರಿ ದುಡ್ಡು ಕೊಟ್ರೂ ಎಷ್ಟು ಕೊಡ್ತಿದೀರಿ? ಎಂದು ಪ್ರಶ್ನಿಸಿದರು.

ಪಂಚ ಗ್ಯಾರಂಟಿಗಳಲ್ಲಿ ಗೊಂದಲ ಇದೆ. ಕೇಂದ್ರ ಅಕ್ಕಿ ಕೊಡ್ತಿಲ್ಲ ಅಂತ ಆರೋಪ ಮಾಡ್ತಿದ್ದೀರಿ. ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಎಷ್ಟಿದೆ? ‌ನೀವು ಕೊಡ್ತಿರೋದೆಷ್ಟು? ಅನ್ನಭಾಗ್ಯದ ಅಕ್ಕಿ ಕಳ್ಳ ಮಾರುಕಟ್ಟೆಯಲ್ಲಿ ಮಾರಾಟ ಆಗ್ತಿದೆ, ಅದನ್ನು ತಡೆಯುವತ್ತ ಗಮನ ಕೊಡಿ ಎಂದು ಚಾಟಿ ಬೀಸಿದರು.

ಇದನ್ನೂ ಓದಿ : ಅನ್ನಭಾಗ್ಯ ಯೋಜನೆಗೆ ಇಂದು ದಶಕದ ಸಂಭ್ರಮ

ಕೇಂದ್ರ ಅಕ್ಕಿ ಕೊಡಕ್ಕಾಗಿಲ್ಲ

ಎಫ್‌ಸಿ‌ಐ ಅಧಿಕಾರಿಗೆ ಒಂದು ರಾಜ್ಯಕ್ಕೆ ಅಕ್ಕಿ ಕೊಡುವ ಅಧಿಕಾರ ಇಲ್ಲ. ನೀವು ಕೇಂದ್ರ ಸರ್ಕಾರದ ಜೊತೆ ಮಾತನಾಡಬೇಕಿತ್ತು. ಅಷ್ಟಕ್ಕೂ ಕೇಂದ್ರ ಹೇಳಿತ್ತಾ, ನಿಮ್ಮ ಅನ್ನಭಾಗ್ಯಕ್ಕೆ ಅಕ್ಕಿ ಕೊಡ್ತೀವಿ ಅಂತ. ಕೇಂದ್ರದ ಹತ್ತಿರ ಇದರ ಬಗ್ಗೆ ಚರ್ಚೆ ಮಾಡಿದ್ರಾ? ಮಾನ್ಸೂನ್ ಕಾರಣದಿಂದ ಅಕ್ಕಿ ಅಲಭ್ಯತೆ ಇದೆ, ಹಾಗಾಗಿ ಕೇಂದ್ರ ಅಕ್ಕಿ ಕೊಡಕ್ಕಾಗಿಲ್ಲ ಎಂದು ಕುಟುಕಿದರು.

ಪಂಜಾಬ್‌ ರಾಜ್ಯದವರು ಅಕ್ಕಿ ಕೊಡಲು ತಯಾರಾದ್ರು, ಆಂದ್ರದವ್ರು, ಛತ್ತೀಸ್‌ಗಡದವ್ರು ಸಹಾಯ ಮಾಡಲು ಮುಂದಾಗಿದ್ರು. ತೆಲಂಗಾಣದವ್ರು ಭತ್ತ ಕೊಡಲು ರೆಡಿ ಇದ್ರು ಅಂದ್ರಿ. ಈಗ ದುಡ್ಡು ಯಾಕೆ ಕೊಡ್ತಿದ್ದಿರಿ ಎಂದು ಪ್ರಶ್ನೆ ಮಾಡಿದರು.

RELATED ARTICLES

Related Articles

TRENDING ARTICLES