Monday, December 23, 2024

ಚಾಕು ಹಿಡಿದು ವಿಧಾನಸೌಧಕ್ಕೆ ಆಗಮಿಸಿದ ಮಹಿಳೆ

ಬೆಂಗಳೂರು : ವಿಧಾನಸಭೆ ಸಭಾಂಗಣಕ್ಕೆ ಅನಾಮಿಕ ವ್ಯಕ್ತಿ ಅಕ್ರಮವಾಗಿ ಪ್ರವೇಶ ಮತ್ತು ಮಹಿಳೆಯೊಬ್ಬರ ಬ್ಯಾಗ್​ ನಲ್ಲಿ ಚಾಕುವೊಂದು ಪತ್ತೆಯಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಈ ಹಿನ್ನೆಲೆ ಸಾರ್ವಜನಿಕರ ಪ್ರವೇಶಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿ ಭದ್ರತೆ ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ: ಚಾಮುಂಡೇಶ್ವರಿ ವರ್ಧಂತಿ‌ ಮಹೋತ್ಸವ ಸಂಭ್ರಮ: ಹರಿದು ಬಂದ ಭಕ್ತಸಾಗರ

ವಿಧಾನಸೌಧದ ಕೆಂಗಲ್ ಗೇಟ್ ಬಳಿ ಸಭಾಧ್ಯಕ್ಷ ಯು.ಟಿ. ಖಾದರ್ ಜೊತೆಗೆ ಬೆಂಗಳೂರು ಪೊಲೀಸ್ ‌ಆಯುಕ್ತ ಸಿಸಿಬಿ ಜಂಟಿ ಆಯುಕ್ತರು  ಭದ್ರತೆ ಪರಿಶೀಲನೆ ನಡೆಸಿದರು. ಇದೇ ವೇಳೆ ವಿಧಾನಸೌಧ ಪ್ರವೇಶಿಸುವ ಪ್ರತಿಯೊಬ್ಬರ ಐಡಿ ಕಾರ್ಡ್ ಮತ್ತು ಪಾಸ್​ ಪರಿಶೀಲಿಸಿ‌ ಬಿಡುವಂತೆ ಸೂಚನೆಯನ್ನು ನೀಡಿದ್ದಾರೆ.

ಭದ್ರತಾ ವೈಫಲ್ಯದ ಕುರಿತು ವಿಧಾನಸೌಧದ ಸ್ಪೀಕರ್‌ ಕೊಠಡಿ ಸಂಖ್ಯೆ  125 ರಲ್ಲಿ ಯು.ಟಿ. ಖಾದರ್ ಸಭೆ ಹಮ್ಮಿಕೊಂಡಿದ್ದರು ಈ  ಸಭೆಯಲ್ಲಿ ಬೆಂಗಳೂರು ‌ಪೊಲೀಸ್ ಆಯುಕ್ತ ದಯಾನಂದ, ಸಿಸಿಬಿ ಜಂಟಿ ಆಯುಕ್ತ ಶರಣಪ್ಪ, ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಭಾಗಿಯಾಗಿದ್ದರು.

RELATED ARTICLES

Related Articles

TRENDING ARTICLES