Wednesday, January 22, 2025

ನಾಳೆಯಿಂದ ಅನ್ನಭಾಗ್ಯ ಫಲಾನುಭವಿಗಳಿಗೆ ‘ಹಣ’ಭಾಗ್ಯ: ಸಿಎಂ ಸಿದ್ದರಾಮಯ್ಯರಿಂದ ಚಾಲನೆ

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿ ಬದಲಿಗೆ ಹಣ ನೀಡುವ ಕಾರ್ಯಕ್ಕೆ ನಾಳೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ: ಬಾಕಿ ವೇತನ ಬಿಡುಗಡೆ ಭರವಸೆ ನೀಡಿದ ಸಚಿವ ದಿನೇಶ್​ ಗುಂಡೂರಾವ್​: ನಾಳೆ ಮಹತ್ವದ ಸಭೆ

ಸೋವಾರ ಸಂಜೆ 5 ಗಂಟೆಗೆ ಅನ್ನಭಾಗ್ಯ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದು ಒಟ್ಟು‌ 1.20 ಕೋಟಿ ಬಿಪಿಎಲ್​ ಕಾರ್ಡ್​  ಫಲಾನುಭವಿಗಳಿಗೆ ಹಣ  ವರ್ಗಾವಣೆಯಾಗಲಿದೆ. ಈ ಯೋಜನೆಯ ಫಲಾನುಭವಿಗಳಾಗಲು ಬ್ಯಾಂಕ್​ ಖಾತೆಗೆ ಆಧಾರ್​ ಲಿಂಕ್​​ ಕಡ್ಡಾಯವಾಗಿದೆ.

ಪ್ರತಿ ಕೆಜಿಗೆ 34 ರೂ. ನಂತೆ 5 ಕೆಜಿಗೆ 170 ರೂ ನಿಗಧಿಪಡಿಸಿದ್ದು 15 ದಿನಗಳ ಒಳಗಾಗಿ ಪಡಿತರ ಕಾರ್ಡ್​ನ ಎಲ್ಲ ಫಲಾನುಭವಿಗಳ ಖಾತೆಗೆ ಹಣ ಜಮಾವಣೆಯಾಗಲಿದೆ.

RELATED ARTICLES

Related Articles

TRENDING ARTICLES